ಪಂಚಮಸಾಲಿ ಮೀಸಲಾತಿ ಘೋಷಣೆ ಸುಳ್ಳು ಭರವಸೆ
ಹರಿಹರ, ಮಾ. 4 – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮಾಜಕ್ಕೆ 2ಡಿ ಮೀಸಲಾತಿ ಘೋಷಣೆ ಮಾಡಲಾಯಿತು ಎಂದು ಸುಳ್ಳು ಭರವಸೆಯನ್ನು ಕೊಟ್ಟಿ ದ್ದಾರೆ. ಪಂಚಮಸಾಲಿ ಸಮಾಜದವರು ಅವರಿಗೆ ಉತ್ತರ ಕೊಡುವ ಕಾಲ ದೂರವಿಲ್ಲ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹೇಳಿದರು.
ಮೀಸಲಾತಿಗಾಗಿ ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ಜಯಮೃತ್ಯುಂ ಜಯ ಸ್ವಾಮೀಜಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸುತ್ತಿದ್ದಾರೆ. ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ತಹಶೀಲ್ದಾರ್ ಕಚೇರಿಗೆ ಮನವಿ ಅರ್ಪಿಸಲು ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಶಶಿಧರಯ್ಯ ಅವರಿಗೆ ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಇದಕ್ಕೂ ಮುಂಚೆ ಸಮಾಜದವರು ಪಕ್ಕೀರಸ್ವಾಮಿ ಮಠದಿಂದ ಮೆರವಣಿಗೆ ಮೂಲಕ ತಹಶಿಲ್ದಾರ್ ಕಚೇರಿಗೆ ಬಂದರು
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಮಿಟ್ಲಕಟ್ಟಿ ಚಂದ್ರಪ್ಪ, ದೀಟೂರು ಶೇಖರಪ್ಪ, ಕರಿ ಬಸಪ್ಪ ದೇವರಬೆಳಕೆರೆ, ತಾಪಂ ಮಾಜಿ ಸದಸ್ಯ ಸಿರಿಗೆರೆ ಕೊಟ್ರೇಶಪ್ಪ, ನಗರಸಭೆ ಸದಸ್ಯ ಗುತ್ತೂರು ಜಂಬಣ್ಣ, ಪರಮೇಶ್ವರ ಗೌಡ್ರು, ಪರಮೇಶ್ವರಪ್ಪ ಕುಣೆಬೆಳಕೆರೆ, ನಿಜಲಿಂಗಪ್ಪ, ನವೀನ್ ಭಾನುವಳ್ಳಿ, ಮಹೇಶ್ ಬನ್ನಿಕೋಡು, ಲತಾ ಕೊಟ್ರೇಶ್, ಹುಗ್ಗಿ ಅಡಿವೇಶ್, ಅಂಗಡಿ ಮಂಜುನಾಥ್, ಕಲ್ಲಯ್ಯ, ಬಸಟೆಪ್ಪ ಬೇವಿನಹಳ್ಳಿ ಮತ್ತಿತರರು ಹಾಜರಿದ್ದರು.