ಜಗಳೂರು ತಾಲ್ಲೂಕಿನ ಕೊಡದಗುಡ್ಡದಲ್ಲಿ ಇದೇ ದಿನಾಂಕ 8 ರ ಬುಧವಾರ ಸಂಜೆ 4.30 ಕ್ಕೆ ಶ್ರೀ ವೀರಭದ್ರೇಶ್ವರ ರಥೋತ್ಸವ ನಡೆಯಲಿದೆ.
ಇಂದು ಗಜವಾಹನೋತ್ಸವ, ನಾಳೆ ಮಂಗಳವಾರ ವೃಷಭ ವಾಹನೋತ್ಸವ, ದಿ. 8ರ ಬುಧವಾರ ಬೆಳಿಗ್ಗೆ 6 ಗಂಟೆಗೆ ಅಗ್ನಿಕುಂಡ ಮಹೋತ್ಸವ ಹಾಗೂ ಅದೇ ದಿನ ಸಾಯಂಕಾಲ 4.30 ಕ್ಕೆ ಮಹಾರಥೋತ್ಸವ ನಡೆಯುವುದು. ದಿನಾಂಕ 10 ರ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಓಕಳಿ ನಡೆಯುವುದು. ದಿನಾಂಕ 9 ಮತ್ತು 10 ರಂದು ಜಾತ್ರೆ ನಡೆಯುವುದು. ದಿನಾಂಕ 11 ರಿಂದ 20 ರವರೆಗೆ ಎತ್ತಿನ ಜಾತ್ರೆ ನಡೆಯಲಿದೆ.