ದಾವಣಗೆರೆ, ಮಾ.5- ವಿಶ್ವ ಜಲ ದಿನಾಚರಣೆ ಅಂಗವಾಗಿ ಸುಯೇಜ್ `ಕಂಪನಿ ವತಿಯಿಂದ ಸ್ವರಚಿತ ಕವನ ಸ್ಪರ್ಧೆಗಳಿಗೆ ಕವನಗಳನ್ನು ಆಹ್ವಾನಿಸಲಾಗಿದೆ.
`ಜಲ ಸಂರಕ್ಷಣೆಯ ಮಹತ್ವ’ ಕುರಿತು ಕವನಗಳನ್ನು ರಚಿಸಿರಬೇಕು. ದಾವಣಗೆರೆ ನಗರದ 18 ರಿಂದ 30 ವಯೋಮಾನದ ಹಾಗೂ 30 ರಿಂದ 60 ವರ್ಷದವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, 18 ರಿಂದ 25 ಸಾಲುಗಳ ಮಿತಿಯಲ್ಲಿ ಕವನಗಳನ್ನು ರಚಿಸಿರಬೇಕು. ಕವನಗಳು ಅನುವಾದಗಳಾಗಿರದೇ ಸ್ವರಚಿತವಾಗಿರಬೇಕು. ಕವನಗಳನ್ನು ಕಳುಹಿಸಲು 15 ನೇ ಮಾರ್ಚ್ ಕೊನೆಯ ದಿನವಾಗಿರುತ್ತದೆ.
ಕವನಗಳನ್ನು ಎ4 ಸೈಜಿನ ಬಿಳಿ ಹಾಳೆಯಲ್ಲಿ ಟೈಪ್ ಮಾಡಿ, ಸುಯೇಜ್ ಪ್ರೋ, ಪ್ರೈ ಲಿ. ಸಪ್ತಗಿರಿ , ಎಸ್ಎಸ್ಎಸ್ ಪ್ಲಾಜಾ, 2 ನೇ ಮಹಡಿ, ನಂ 565 A, ಆದಾಯ ತೆರಿಗೆ ಇಲಾಖೆಯ ಪಕ್ಕದಲ್ಲಿ ಹದಡಿ ರಸ್ತೆ ದಾವಣಗೆರೆ ಅಥವಾ 9886477771 ವ್ಯಾಟ್ಸಾಪ್ಗೆ ಕಳುಹಿಸುವಂತೆ ಕೋರಲಾಗಿದೆ.