ದಾವಣಗೆರೆ, ಮಾ.5- ತಾಲ್ಲೂಕಿನ ಆಲೂರು ಗ್ರಾಮದ ಶ್ರೀ ಉಚ್ಚಂಗೆಮ್ಮ ದೇವಿ ಜಾತ್ರೆ ನಾಡಿದ್ದು ದಿನಾಂಕ 7ರ ಮಂಗಳವಾರದಿಂದ 9 ರ ಗುರುವಾರದವರೆಗೆ ನಡೆಯಲಿದೆ.
ದಿ. 7 ರ ಮಂಗಳವಾರ, ದಿ. 8 ರ ಬುಧವಾರ ಹಾಗೂ 9 ರ ಗುರುವಾರ ಅಮ್ಮನವರ ಕಾರ್ಯಕ್ರಮಗಳು ಜರುಗುವವು.
ದಿನಾಂಕ 7 ರ ಸಂಜೆ 7 ಗಂಟೆಗೆ ಮೊರಾರ್ಜಿ ಮೆಲೋಡೀಸ್ (ದಾವ ಣಗೆರೆ) ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯುವುದು. ದಿನಾಂಕ 9 ರ ಗುರುವಾರ ಸಂಜೆ 7 ಕ್ಕೆ ತುಮಕೂರು ಜ್ಯೋತಿ ಆರ್ಕೆಸ್ಟ್ರಾ ಅವರಿಂದ ರಸಮಂಜರಿ ಕಾರ್ಯ ಕ್ರಮ ನಡೆಯುವುದು. ದಿ. 10 ರ ಶುಕ್ರವಾರ ಮಧ್ಯಾಹ್ನ 3 ಕ್ಕೆ ಮಲ್ಲ ಯುದ್ಧದ ಕುಸ್ತಿಗಳು ಜರುಗಲಿದೆ.