ಹರಿಹರ, ಮಾ. 5 – ಹಳೆ ಪಿ.ಬಿ. ರಸ್ತೆಯ ಪಕ್ಕದಲ್ಲಿರುವ ಹಳೆ ಆಸ್ಪತ್ರೆ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಹೆಚ್. ನಿಜಗುಣ, ಪ್ರಧಾನ ಕಾರ್ಯದರ್ಶಿ ನಂದಿಗಾವಿ ಶ್ರೀನಿವಾಸ್, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸುವುದರಿಂದ ಇಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಅಡ್ಡಿಯಾಗುತ್ತದೆ ಎಂದವರು ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಕೈಗಾರಿಕಾ ಸ್ಥಾಪಿಸಿ ಗೈತವೈಭವ ಮರುಕಳಿಸುವಂತೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸಾರ್ವಜನಿಕರ ಮುಂದೆ ಹೇಳಿದ್ದರು. ಆದರೆ, ಇದುವರೆಗೆ ಆ ಕೆಲಸವು ಕಾರ್ಯಗತಗೊಳಿಸಲು ಆಗಲಿಲ್ಲ ಎಂದಿದ್ದಾರೆ.
ಸಂಸದರು ಮೂಲ ಸೌಕರ್ಯಗಳ ಕೊರತೆ ನೆಪ ವನ್ನು ಮುಂದೆ ಇಟ್ಟುಕೊಂಡು ಮೆಡಿಕಲ್ ಕಾಲೇಜು ಮಂಜೂರಾತಿಗೆ ಪ್ರಯತ್ನ ಮಾಡಲಿಲ್ಲ. ಹರಿಹರೇಶ್ವರ ದೇವಸ್ಥಾನವನ್ನು ಎ ದರ್ಜೆಗೆ ಮಾರ್ಪಾಟು ಮಾಡಲಿಲ್ಲ, ಬೈರನಪಾದ ಯೋಜನೆ ಮತ್ತು ಅಗಸನಕಟ್ಟೆ ಕೆರೆ ಅಭಿವೃದ್ಧಿ ಮಾಡಲಿಲ್ಲ ಎಂದವರು ಆಕ್ಷೇಪಿಸಿದ್ದಾರೆ.
ಇವೆಲ್ಲಾ ಮಾಡಿದರೆ ಹರಿಹರ ನಗರ ದಾವಣಗೆರೆಗಿಂತ ಪ್ರಬಲವಾಗಿ ಬೆಳೆಯು ತ್ತದೆ ಎಂದು ಸಂಸದರು ಉದ್ದೇಶಪೂರ್ವ ಕವಾಗಿ ಹರಿಹರ ನಗರಕ್ಕೆ ಅನ್ಯಾಯವನ್ನು ಮಾಡುವುದಕ್ಕೆ ಮುಂದಾಗಿದ್ದಾರೆ ಎಂಬ ಬಲವಾದ ಅನುಮಾನ ಹುಟ್ಟುಕೊಂಡಿದೆ ಎಂದೂ ಅವರು ಹೇಳಿದ್ದಾರೆ