ಗ್ರಾಮೀಣ ಪ್ರದೇಶದಲ್ಲೇ ಹೆಚ್ಚಿನ ವಿಜ್ಞಾನಿಗಳ ಸೃಷ್ಠಿ

ಗ್ರಾಮೀಣ ಪ್ರದೇಶದಲ್ಲೇ ಹೆಚ್ಚಿನ ವಿಜ್ಞಾನಿಗಳ ಸೃಷ್ಠಿ

ಸೊಫ್ರೊಸೈನ್ ಕಾನ್ಸೆಪ್ಟ್ ಶಾಲೆಯಲ್ಲಿನ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ.ಜೆ.ಬಿ.ರಾಜ್

ದಾವಣಗೆರೆ, ಮಾ.3 – ಮಕ್ಕಳಲ್ಲಿ ಕಲಿ ಯುವ ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗೂ ಕ್ರಿಯಾಶಕ್ತಿ ಜಾಗೃತಗೊಳಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸದಸ್ಯ ಹಾಗೂ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ.ಜೆ.ಬಿ.ರಾಜ್ ಹೇಳಿದರು. 

ರಾಷ್ಟ್ರೀಯ ವಿಜ್ಞಾನ  ದಿನಾಚರಣೆ ಪ್ರಯುಕ್ತ ನಗರದ ಸೊಫ್ರೊಸೈನ್ ಕಾನ್ಸೆಪ್ಟ್ ಶಾಲೆಯಲ್ಲಿ ಕಳೆದ ವಾರ ನಡೆದ ‘ಎಲ್ಲಿ  ಜ್ಞಾನವೋ  ಅಲ್ಲಿ  ವಿಜ್ಞಾನ’ ಎಂಬ ಪ್ರಗ್ಯಾನ್ – 2023 ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ವಿಜ್ಞಾನಿಗಳು ಸಮಾಜದ ಸ್ವತ್ತು. ಕೆಸರಲ್ಲಿ ಕಮಲ ಅರಳುವಂತೆ, ಬಡತನ ಮತ್ತು ಗಾಮೀಣ ಪ್ರದೇಶಗಳಲ್ಲಿಯೇ ವಿಜ್ಞಾನಿಗಳು ಹುಟ್ಟುವುದು.  ಹೆಚ್ಚಿನ ವಿಜ್ಞಾನಿಗಳು ಗ್ರಾಮೀಣ ಪ್ರದೇಶದಿಂದಲೇ ಸೃಷ್ಠಿಯಾಗಿದ್ದಾರೆ. ಮಹಿಳೆಯರು ಅಡುಗೆ ಮನೆಯ ವಸ್ತುಗಳಿಂದಲೇ ಮಕ್ಕಳಲ್ಲಿರುವ ವಿಜ್ಞಾನದ ಮನೋಭಾವ ಕೆರಳಿಸಬಹುದು ಎಂದು ಸ್ಪೂರ್ತಿಯ ನುಡಿಗಳನ್ನಾಡಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಂ.ಗುರುಸಿದ್ಧಸ್ವಾಮಿ ಮಾತನಾಡಿ, ಧಾರವಾಹಿ ನೋಡುತ್ತ ಕಾಲಹರಣ ಮಾಡುವ ಕೆಲವು ಪೋಷಕರಿಗೆ ಮಕ್ಕಳಲ್ಲಿ ವೈಜ್ಞಾನಿಕ ದೃಷ್ಠಿಕೋನ ಬೆಳೆಸಬೇಕು. ವಿಜ್ಞಾನದ ಮನೋಭಾವನೆ ಬೆಳೆಸುವುದರಿಂದ ಮಕ್ಕಳನ್ನು ಕ್ರಿಯಾಶೀಲ ಚಿಂತಕರನ್ನಾಗಿ ಮಾಡುತ್ತದೆ ಎಂದರು.

ವಿಜ್ಞಾನ ವಸ್ತು ಪ್ರದರ್ಶನದ ನಿರ್ಣಾಯಕರಾಗಿ ಜೀವಶಾಸ್ತ್ರ ಉಪನ್ಯಾಸಕ ಎಸ್.ಆರ್. ಸಿದ್ದೇಶ್ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಶಿವ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಎಲ್. ಜಗದೀಶ, ಆಡಳಿತಾ ಧಿಕಾರಿ ಟಿ.ಎನ್. ಶಿವಯೋಗಿ ಪ್ರಾಂಶುಪಾಲ ಕೆ. ಮೊಹಮ್ಮದ್ ಖಾಲಿದ್ ಹಾಗೂ ಎಚ್. ಅರ್ಜುನ್ ಮತ್ತು ಗ್ರಾ.ಪಂ. ಅಧ್ಯಕ್ಷ ಬಸವೇಶ್ ಪಟೇಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!