ದಾವಣಗೆರೆ, ಮಾ.3- ಬ್ರಾಹ್ಮಣ ಸಮಾಜ ಸೇವಾ ಸಂಘ, ಶ್ರೀ ಶಂಕರ ಸೇವಾ ಸಂಘ ಹಾಗೂ ಸಿಟಿ ಸೆಂಟ್ರಲ್ ಹಾಸ್ಪಿಟಲ್ ಇವರ ಸಂಯುಕ್ತಾಶ್ರಯದಲ್ಲಿ ನಾಡಿದ್ದು ದಿನಾಂಕ 5 ರ ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಗರದ ರಿಂಗ್ ರಸ್ತೆಯ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಶಂಕರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ, ಹೃದ್ರೋಗ, ಕೀಲು-ಮೂಳೆ ಪರೀಕ್ಷೆ, ದಂತ ತಪಾಸಣೆ, ನೇತ್ರ ಪರೀಕ್ಷೆ, ಪ್ರಸೂತಿ ಮತ್ತು ಸ್ತ್ರೀ ರೋಗ ಪರೀಕ್ಷೆ, ಶಿಶು ಮತ್ತು ಮಕ್ಕಳ ತಪಾಸಣೆ, ಮೂತ್ರ ರೋಗ ಪರೀಕ್ಷೆ ಮಾಡಿ ತಜ್ಞರಿಂದ ಸೂಕ್ತ ಚಿಕಿತ್ಸೆ ಮತ್ತು ಸಲಹೆ ನೀಡಲಾಗುವುದು. ರಕ್ತ ಪರೀಕ್ಷೆಗೆ ಬರುವವರು ಬೆಳಿಗ್ಗೆ 8 ಗಂಟೆಯೊಳಗೆ ಬರುವಂತೆ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ. ಎಂ.ಸಿ. ಶಶಿಕಾಂತ್ ತಿಳಿಸಿದ್ದಾರೆ.