ರಾಣೇಬೆನ್ನೂರ, ಮಾ.3 – ಜಿ.ಪಂ.ಮಾಜಿ ಸದಸ್ಯ ಸಂತೋಷ ಕುಮಾರ ಪಾಟೀಲ ಅವರ ಹುಟ್ಟು ಹಬ್ಬದ ಅಂಗವಾಗಿ ನಗರದ ಹಲಗೇರಿ ರಸ್ತೆಯ ನವಯುಗದ ಕಚೇರಿಯಲ್ಲಿ ನಾಳೆ ದಿನಾಂಕ 4ರ ಶನಿವಾರ ಬೆಳಿಗ್ಗೆ 10.30ಕ್ಕೆ ಸರ್ವಧರ್ಮ ಗುರುಗಳ ಗುರುವಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಸಂತೋಷಕುಮಾರ ಪಾಟೀಲ ಅಭಿಮಾನಿ ಬಳಗದ ಅಧ್ಯಕ್ಷ ಯುವರಾಜ ಬಾರಾಟಕ್ಕೆ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮ ದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದು, ಅವರ ಪಾದಪೂಜೆಯ ಮೂಲಕ ಸತ್ಕರಿಸಲಾಗುವುದು. ಮಾಜಿ ಶಾಸಕ ವಿ.ಎಸ್.ಕರ್ಜಗಿ ಅವರ ಪುತ್ರ ಡಾ.ಸಂಜಯ ಕರ್ಜಗಿ, ಮಾಜಿ ಶಾಸಕ ಜಿ.ಶಿವಣ್ಣ ಪುತ್ರ ಗುರುರಾಜ ತಿಳವಳ್ಳಿ ಅವರ ಮಾರ್ಗ ದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಅಭಿಮಾನಿ ಬಳಗದ ಮುಖಂಡರಾದ ಸಿದ್ದನಗೌಡ ಪಾಟೀಲ, ಕಿರಣ ಬುಳನಗೌಡ್ರ, ಮಂಜು ಶಿರಗೇರಿ, ಚಂದ್ರಶೇಖರ ಗೊಣಿಬಸಮ್ಮನವರ, ಹನುಮಂತರಾಜ ಚನ್ನಗೌಡ್ರ, ಕುಬೇರಪ್ಪ ಅಟವಾಳಗಿ, ಚಂದ್ರು ನಾಯ್ಕ ಸೇರಿದಂತೆ ಇತರರಿದ್ದರು.