ಯಶಸ್ಸು ಸಾಧಿಸಲು ಬದ್ಧತೆ ಮುಖ್ಯ

ಯಶಸ್ಸು ಸಾಧಿಸಲು ಬದ್ಧತೆ ಮುಖ್ಯ

ಕೊಕ್ಕನೂರು: ವಿದ್ಯಾರ್ಥಿಗಳಿಗೆ ಡಿವೈಎಸ್ಪಿ ಪ್ರಕಾಶ್

ಮಲೇಬೆನ್ನೂರು, ಮಾ. 2- ಕೊಕ್ಕನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2017 ನೇ ಸಾಲಿನ ವಿದ್ಯಾರ್ಥಿಗಳಿಂದ ಬುಧವಾರ ಶಾಲೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಉತ್ತೇಜನ ಕಾರ್ಯಾಗಾರ ಹಾಗೂ ಪುಲ್ವಾಮ ದಾಳಿಯ ಯೋಧರ ನಮನದೊಂದಿಗೆ ಮಾಜಿ ಸೈನಿಕರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಈ ಹಿಂದೆ ಇದೇ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಶಾಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಇದೀಗ ಉನ್ನತ ಹುದ್ದೆಗೆ ಬಡ್ತಿ ಹೊಂದಿರುವ ಸುರೇಂದ್ರನಾಯ್ಕ ಅವರು ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣವನ್ನು ಹೇಳಿ ಕೊಡುವುದರ  ಜೊತೆಗೆ ವಿದ್ಯಾರ್ಥಿ ಜೀವನದ ಮೌಲ್ಯಗಳನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ಉಪನ್ಯಾಸಕ ಅರಕೆರೆಯ ಎ.ಹೆಚ್. ಮಂಜಪ್ಪ ಇವರು ವಿದ್ಯಾರ್ಥಿಗಳಲ್ಲಿ ಮನೋವಿಕಾಸ, ವ್ಯಕ್ತಿತ್ವ ವಿಕಸನ ಹಾಗೂ ಮೌಲ್ಯ ಶಿಕ್ಷಣದ ಬಗ್ಗೆ ಮಾಹಿತಿ ನೀಡುವುದ ರೊಂದಿಗೆ ಪರೀಕ್ಷಾ ಮನೋಭಾವದ ಬಗ್ಗೆ ಬದಲಾವಣೆಯ ರೂಪುರೇಷೆಗಳನ್ನು ತಿಳಿಸಿದರು.

ದಾವಣಗೆರೆ ಜಿಲ್ಲೆಯ ಡಿ ಆರ್  ಡಿವೈಎಸ್ಪಿ ಪಿ.ಬಿ. ಪ್ರಕಾಶ್  ಅವರು ಶಾಲೆಯ ಹಳೆ ವಿದ್ಯಾರ್ಥಿಯಾಗಿ ವಿದ್ಯಾರ್ಥಿಗಳಿಗೆ ತಮ್ಮ ಜೀವನದ ಹಾದಿಯನ್ನು ವಿವರಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಭಾವದ ಸಂದೇಶಗಳನ್ನು ತಿಳಿಸಿದರು.

ಬದುಕಿನಲ್ಲಿ ಯಶಸ್ಸು ಸಾಧಿಸಲು ನಿರಂತರ ಓದು ಮತ್ತು ಬದ್ಧತೆ ಬಹಳ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ದೊಡ್ಡ ಕನಸುಗಳನ್ನು ಕಂಡು ನನಸಾಗಿಸಿ ಕೊಳ್ಳಿ ಎಂದು ವಿದ್ಯಾರ್ಥಿಗಳನ್ನು ಹುರಿ ದುಂಬಿಸಿದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಸುರೇಶ್ ರಾವ್, ಕೆ.ಪಿ. ಚಂದ್ರಪ್ಪ, ಅಂಜಿನಪ್ಪ, ದಾವಣಗೆರೆಯ ಚಂದ್ರಪ್ಪ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು. 

ಶಾಲೆಯ ಮುಖ್ಯ ಶಿಕ್ಷಕ ಮಂಜಪ್ಪ, ಸಹ ಶಿಕ್ಷಕರುಗಳಾದ ಬಿ. ಆರ್. ಕುಮಾರಚಾರಿ, ರವಿಕುಮಾರ್, ಸಂತೋಷ್, ರಮೇಶ್, ತಿಪ್ಪೇಶ್ ಗಡ್ಡದ್, ಛಾಯಾ, ಶ್ವೇತ, ಸರೋಜಿನಿ  ಮತ್ತು ಅಡುಗೆ ಸಿಬ್ಬಂದಿಗಳು ಈ ವೇಳೆ ಹಾಜರಿದ್ದರು.  2017 ನೇ ಸಾಲಿನ ಜಿ.ಎಸ್. ವಿಶ್ವ, ಎ.ಹೆಚ್. ನಾಗರಾಜ್, ಕೆ.ಎಸ್. ನಾಗರಾಜ್, ಷಣ್ಮುಖ, ಪ್ರಸನ್ನ, ಮನು ಸೇರಿದಂತೆ ಇತರರು ಕಾರ್ಯಕ್ರಮ ಯಶಸ್ವಿಗೊಳಿಸಿದರು.

error: Content is protected !!