ದಾವಣಗೆರೆ, ಮಾ.2 – ಸ್ಕೌಟ್ಸ್ ಮತ್ತು ಗೈಡ್ಸ್ನ ಸಂಸ್ಥಾಪಕರಾದ ಬೇಡೆನ್ ಪೊವೆಲ್ ಮತ್ತು ಲೇಡಿ ಬೇಡೆನ್ ಪೊವೆಲ್ ಅವರ ಜನ್ಮ ದಿನಾಚರಣೆಯನ್ನು ಸ್ಕೌಟ್ ಮತ್ತು ಗೈಡ್ ಸಂಸ್ಥಾ ಪನಾ ದಿನಾಚರಣೆಯಾಗಿ ಮತ್ತು ಚಿಂತಕರ ದಿನವನ್ನಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಸಿದ್ಧಗಂಗಾ ಸಂಸ್ಥೆಯಲ್ಲಿ ಆಚರಿಸಲಾಯಿತು.
ಜಿಲ್ಲಾ ಮುಖ್ಯ ಆಯುಕ್ತ ಮುರುಘ ರಾಜೇಂದ್ರ ಚಿಗಟೇರಿ, ಸ್ಕೌಟ್ಸ್ ಮತ್ತು ಗೈಡ್ಸ್ ಸೇವಾ ಸಂಸ್ಥೆಯ ಮಹತ್ವ ತಿಳಿಸುತ್ತಾ ಸಿದ್ಧ ಗಂಗಾ ಮಕ್ಕಳ ಚಟುವಟಿಕೆಗಳನ್ನು ಶ್ಲ್ಯಾಘಿಸಿದರು. ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸ್ಕೌಟ್, ಗೈಡ್ಸ್, ಕಬ್ಸ್, ಬುಲ್ಬುಲ್ಸ್ನ ಸುಮಾರು 450ಕ್ಕೂ ಹೆಚ್ಚು ಮಕ್ಕಳು ಮತ್ತು ಶಿಕ್ಷಕರು ಪ್ರಮುಖ ರಸ್ತೆಗಳಲ್ಲಿ ಕಾಲ್ನಡಿಗೆ ಜಾಥಾ ನಡೆಸಿದರು. ಜಿಲ್ಲಾ ಸಂಸ್ಥೆಯ ಉಪ ಆಯುಕ್ತ ಜಸ್ಟಿನ್ ಡಿಸೋಜಾ ಹಸಿರು ನಿಶಾನೆ ತೋರಿ ರಾಲಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಎಡಿಸಿಗಳಾದ ರೇಖಾರಾಣಿ (ಗೈಡ್ಸ್) ಮತ್ತು ಡಾ.ಡಿ.ಎಸ್.ಜಯಂತ್ (ಸ್ಕೌಟ್ಸ್), ಖಜಾಂಚಿ ಗಾಯತ್ರಿ ಚಿಮ್ಮಡ್, ಕಾರ್ಯದರ್ಶಿ ಶಶಿಕಲಾ ಹಾಗೂ ಇತರರು ಉಪಸ್ಥಿತರಿದ್ದರು.