ದಾವಣಗೆರೆ, ಮಾ.2-ರಾಜ್ಯ ಸರ್ಕಾರವು ಸರ್ಕಾರಿ ನೌಕರರ ಪರಿಷ್ಕರಣೆ ಮಧ್ಯೆ ಮಧ್ಯಂತರ ಶೇ. 17 ವೇತನ ಹೆಚ್ಚಳ ಮಾಡುವ ಜೊತೆಗೆ, ನಿವೃತ್ತ ನೌಕರರ ವೇತನವನ್ನು ಹೆಚ್ಚಿಸಿ ಆದೇಶವನ್ನು ಹೊರಡಿಸಿದೆ ಇದರಿಂದ ಎಲ್ಲಾ ನಿವೃತ್ತ ನೌಕರರು ಹರ್ಷಿತರಾಗಿದ್ದಾರೆ ಎಂದು ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ವೇತನ ಹೆಚ್ಚಿಸಿ ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಹೆಚ್ಚಳಕ್ಕೆ ಶ್ರಮಿಸಿದ ರಾಜ್ಯ ಸರ್ಕಾರಿ ವನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಹಾಗೂ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಭೈರಪ್ಪ ಅವರಿಗೆ, ನಿವೃತ್ತ ನೌಕರರ ಪರವಾಗಿ ಅಭಿನಂದನೆಗಳನ್ನು ಉಜ್ಜಿನಪ್ಪ ಸಲ್ಲಿಸಿದ್ದಾರೆ.
January 12, 2025