ಮನೀಶ್‌ ಸಿಸೋಡಿಯಾ ಬಂಧನ ಖಂಡಿಸಿ ಆಮ್ ಆದ್ಮಿ ಪ್ರತಿಭಟನೆ

ಮನೀಶ್‌ ಸಿಸೋಡಿಯಾ ಬಂಧನ ಖಂಡಿಸಿ ಆಮ್ ಆದ್ಮಿ ಪ್ರತಿಭಟನೆ

ದಾವಣಗೆರೆ, ಫೆ.28- ಅಬಕಾರಿ ನೀತಿಯಲ್ಲಿ ಅವ್ಯವಹಾರ ನಡೆಸಿದ  ಆರೋಪದ ಮೇಲೆ ದೆಹಲಿ  ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು  ಸಿ.ಬಿ.ಐ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ದೆಹಲಿ ಶಿಕ್ಷಣ ಸಚಿವರಾಗಿ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಮನೀಶ್‌ ಸಿಸೋ ಡಿಯಾರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸ ಲಾಗಿದ್ದು, ಕೂಡಲೇ ಬಿಡುಗಡೆ ಮಾಡಬೇಕೇಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಚಂದ್ರು ಬಸವಂತಪ್ಪ, ಕಾರ್ಯದರ್ಶಿ ಅರುಣ್ ಕುಮಾರ್, ಸಂಘಟನಾ ಕಾರ್ಯದರ್ಶಿ ಅದಿಲ್ ಖಾನ್ ಎಸ್.ಕೆ, ಮುಖಂಡರಾದ ಶಬ್ಬೀರ್ ಅಹಮದ್, ರವೀಂದ್ರ.ಕೆ, ವೆಂಕಟೇಶ್, ಆಯಿಷಾ, ಧನ್ಯ ನಾಯ್ಕ್, ಚಂದ್ರಪ್ಪ, ಕಲ್ಲೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!