ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ: ರೈತರ ಪ್ರತಿಭಟನೆ

ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ: ರೈತರ ಪ್ರತಿಭಟನೆ

ರಾಣೇಬೆನ್ನೂರು, ಫೆ. 27 – ಗದಗದಿಂದ ಹೊನ್ನಾಳಿಯವರೆಗೆ ನಡೆಯುತ್ತಿರುವ ರಾಜ್ಯ ಹೆದ್ದಾರಿ 57ರ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು,  ಈ ಕಳಪೆ ಕಾಮಗಾರಿಯನ್ನು ತಕ್ಷಣವೇ  ನಿಲ್ಲಿಸಿ, ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು,  ನಾಗರಿಕರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಅಂದಾಜು 940 ಕೋಟಿ ರೂ ಅನುದಾನದಲ್ಲಿ ಗದಗದಿಂದ ಹೊನ್ನಾಳಿವರಗೆ ರಾಜ್ಯ ಹೆದ್ದಾರಿ  ಕಾಮಗಾರಿಯನ್ನು ಗುತ್ತಿಗೆ ಪಡೆದಿರುವ ಮೆ.ಗವಾರ ಕನ್‌ಸ್ಟ್ರಕ್ಷನ್ ಕಂಪನಿಯು ಮಾಡುತ್ತಿರುವ ಕಾಮಗಾರಿ  ಕಳಪೆಯಾಗಿದ್ದು ತಕ್ಷಣ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕಳಪೆ ಕಾಮಗಾರಿ ಖಂಡಿಸಿ ಫೆ. 27 ರಂದು ಬೆಳಗ್ಗೆ 10 ಗಂಟೆಗೆ ತಾಲೂಕಿನ ಕುಪ್ಪೇಲೂರು ಸಮೀಪದ ಯಲಬಡಗಿ ಕ್ರಾಸ್ ನಿಂದ ಹೊನ್ನಾಳಿಯವರೆಗೆ ರೈತ ಸಂಘದ ನೂರಾರು ಕಾರ್ಯಕರ್ತರು  ಪಾದಯಾತ್ರೆಯ ಮೂಲಕ ಸಾಗಿ ಹೊನ್ನಾಳಿ ತಹಶೀಲ್ದಾರ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.

ನಿಂಗರೆಡ್ಡಿ ಅಂತರವಳ್ಳಿ, ಎಸ್ ಬಿ ಅಂಬಿಗೇರ, ಹರಿಹರ ಗೌಡ ಪಾಟೀಲ,  ಹನುಮರೆಡ್ಡಿ ಬಿದರಿ, ಎಲ್ಲಪ್ಪ ಗಂದಣ್ಣನವರ, ಜಮಾಲಸಾಬ ಶೇತಸನದಿ,  ಗಣೇಶ ಬಿದರಿ, ಸುರೇಶ ವಟ್ಲಳ್ಳಿ,  ಅಶೋಕ ಗೌಡ ಗಂಗನಗೌಡ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

error: Content is protected !!