ಹಳ್ಳಿಹಾಳ್‌ನಲ್ಲಿ ಮುರುಡ ಬಸವೇಶ್ವರ ರಥೋತ್ಸವ

ಹಳ್ಳಿಹಾಳ್‌ನಲ್ಲಿ ಮುರುಡ ಬಸವೇಶ್ವರ ರಥೋತ್ಸವ

ಮಲೇಬೆನ್ನೂರು, ಫೆ.27- ಹಳ್ಳಿಹಾಳ್ ಗ್ರಾಮದ ಶ್ರೀ ಮುರುಡ ಬಸವೇಶ್ವರ ದೇವರ ರಥೋತ್ಸವವು ಸೋಮವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ವಿವಿಧ ಕಲಾ ಮೇಳಗಳು ರಥೋತ್ಸವದಲ್ಲಿ ಗಮನ ಸೆಳೆದವು. ಮಂಗಳವಾರ ಸಂಜೆ ಓಕಳಿ ಇರುತ್ತದೆ.

ಕಬಡ್ಡಿ : ರಥೋತ್ಸವದ ಅಂಗವಾಗಿ ಗ್ರಾಮದ ಯುವಕರು ಮಂಗಳವಾರ ರಾತ್ರಿ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದಾರೆ.

error: Content is protected !!