ಹರಿಹರ, ಫೆ. 27 – ಇಲ್ಲಿನ ಗಾಂಧಿ ಮೈದಾನದಲ್ಲಿ ಕೆನೆಲ್ ಕ್ಲಬ್ ವತಿಯಿಂದ ರಾಜ್ಯ ಮಟ್ಟದ ಶ್ವಾನ ಪ್ರದರ್ಶನ ಆಯೋಜಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿವಿಧ ತಳಿಯ 180ಕ್ಕೂ ಹೆಚ್ಚು ಶ್ವಾನಗಳನ್ನು ಪ್ರದರ್ಶಿಸಲಾಯಿತು. ಕೆನೆಲ್ ಕ್ಲಬ್ನ ಅಧ್ಯಕ್ಷ ಎಸ್.ಎಂ.ಲಿಂಗರಾಜ್, ಪದಾಧಿಕಾರಿಗಳಾದ ವೀರಣ್ಣ ಯಾದವಾಡ, ಗಂಗಾಧರ, ಆನಂದ್, ಪ್ರಮೋದ್ ಮೋಹಿತೆ ಹಾಗೂ ಇತರರಿದ್ದರು. ಬೆಂಗಳೂರಿನ ವಿಶ್ವನಾಥ ಮೈಲಯ್ಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.
ಹರಿಹರ : ರಾಜ್ಯ ಮಟ್ಟದ ಶ್ವಾನ ಪ್ರದರ್ಶನ
![19 hrr shwana 28.02.2023 ಹರಿಹರ : ರಾಜ್ಯ ಮಟ್ಟದ ಶ್ವಾನ ಪ್ರದರ್ಶನ](https://janathavani.com/wp-content/uploads/2023/02/19-hrr-shwana-28.02.2023-860x387.jpg)