ಆಚಾರ-ವಿಚಾರ ಶುದ್ಧಿಯಾಗಿಟ್ಟುಕೊಂಡ ಚೇತನಗಳು ಕಣ್ಮರೆ

ಆಚಾರ-ವಿಚಾರ ಶುದ್ಧಿಯಾಗಿಟ್ಟುಕೊಂಡ ಚೇತನಗಳು ಕಣ್ಮರೆ

ಲಿಂ.ಶ್ರೀ ಮಲ್ಲಿಕಾರ್ಜುನ  ಸ್ವಾಮಿಗಳವರ ಶ್ರದ್ಧಾಂಜಲಿ ಸಭೆಯಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ

ಸಾಣೇಹಳ್ಳಿ, ಫೆ.24- ಇಲ್ಲಿನ ಎಸ್. ಎಸ್. ರಂಗಮಂದಿರದಲ್ಲಿ   ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ 15ನೇ  ಶ್ರದ್ದಾಂಜಲಿ ಮೊನ್ನೆ ಜರುಗಿತು.

ಸಾನಿಧ್ಯ ವಹಿಸಿದ್ದ ಶ್ರೀ ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,  ಮಲ್ಲಿಕಾರ್ಜುನ ಶ್ರೀಗಳು 15 ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದರು.  ಪೂಜ್ಯರು ಶಿವಯೋಗಿ ಸಿದ್ಧರಾಮೇಶ್ವರರಂತೆ ಕಾಯಕ ಯೋಗಿಗಳಾಗಿ, ಶಿವಯೋಗಿಗಳಾಗಿ ಕೆಲಸ ಮಾಡುತ್ತಿದ್ದರು ಎಂದರು.

ಸಿರಿಗೆರೆ ಬೃಹನ್ಮಠ ಮತ್ತು ಅದರ ಶಾಖಾ ಮಠಗಳ ಬಹುತೇಕ ಕೃಷಿ ಭೂಮಿಯನ್ನು ಅಡಿಕೆ, ತೆಂಗು, ಬಾಳೆ ತೋಟಗಳನ್ನಾಗಿಸಿದ ಶ್ರೇಯಸ್ಸು ಪೂಜ್ಯರಿಗೆ ಸಲ್ಲಬೇಕು. ಅದರ ಫಲಿತಾಂಶವಾಗಿ ಇಂದು ಶ್ರೀಮಠಕ್ಕೆ 40-50 ಲಕ್ಷ ವಾರ್ಷಿಕ ಆದಾಯ ಬರುತ್ತಿದೆ. ಅವರು ವೇದಿಕೆಯ ಮೇಲೆ ಮಾತನಾಡುತ್ತಿದ್ದುದು; ಲಿಂಗವಂತ ತತ್ವವನ್ನು ಕುರಿತೇ ಹೊರತು, ಲೌಕಿಕ ಮಾತುಗಳನ್ನಲ್ಲ. ಶ್ರೀಮಠದ ಹಿಂದಿನ ಸಂಪ್ರದಾಯದಂತೆ ದೀಪಾರಾಧನೆ ಕಾಣಿಕೆಯನ್ನು ಸಂಗ್ರಹಿಸಲು ತಿಂಗಳು ಗಟ್ಟಲೆ ಹಳ್ಳಿಗಳ ದೇವಸ್ಥಾನಗಳಲ್ಲಿ ಬಿಡಾರ ಮಾಡುತ್ತಿದ್ದರು.

ಎಂಥ ಸಂದಿಗ್ಧ ಪರಿಸ್ಥಿತಿ ಎದುರಾ ದರೂ ಎದೆಗುಂದುತ್ತಿರಲಿಲ್ಲ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾ ಸ್ವಾಮಿಗಳವರ ಹೆಗಲೆಣೆಯಾಗಿ ಶ್ರಮಿಸಿ ದರು. ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾಗಿ ಕೊನೆಯ ತನಕ ಸೇವೆ ಸಲ್ಲಿಸಿದರು. ಅವರೆಂದೂ ಕೀರ್ತಿ ವಾರ್ತೆಗೆ ಹಾತೊರೆ ದವರಲ್ಲ. ಕಾಯಕ ಅವರಿಗೆ ನಿತ್ಯ ಜಪವಾಗಿತ್ತು. ದಿನದ ಎರಡೂ ಹೊತ್ತು ಶಿವಪೂಜೆ ಮಾಡುತ್ತಿದ್ದರು. ಒಂದು ಹೊತ್ತು ಮಾತ್ರ ಪ್ರಸಾದ ಸ್ವೀಕರಿಸುತ್ತಿ ದ್ದರು.  ಒಟ್ಟಾರೆ ಯಾಗಿ ಹೇಳುವುದಾದರೆ ದೊಡ್ಡ ಗುರುಗಳ ಪರಂಪರೆಯನ್ನು ಮುಂದು ವರೆಸಿದವರು ಮಲ್ಲಿಕಾರ್ಜುನ ಶ್ರೀಗಳು. ಮಠ, ಸಮಾಜದ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಂಡ, ಆಚಾರ-ವಿಚಾರ ಶುದ್ಧಿಯಾಗಿಟ್ಟುಕೊಂಡ ಮಲ್ಲಿ ಕಾರ್ಜುನ ಶ್ರೀಗಳಂಥ ಹಿರಿಯ ಚೇತನ ಗಳು ಮಠ, ಸಮಾಜದಿಂದ ಕಣ್ಮರೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿಯೇ ಸಮಾಜದ ನೈತಿಕ ಮಟ್ಟ ಕುಸಿಯುತ್ತಿದೆ. ಮಲ್ಲಿಕಾರ್ಜುನ ಶ್ರೀಗಳಂತೆ ನೈತಿಕತೆಯನ್ನು ಎತ್ತರಿಸುವಂಥ ಪ್ರಯತ್ನ ಆಗುತ್ತಿಲ್ಲ.  

ಈ ಹಿನ್ನೆಲೆಯಲ್ಲಿಯೇ ಪ್ರತಿ ತಿಂಗಳ ಮೊದಲ ದಿನ ಸಾಣೇಹಳ್ಳಿಯಲ್ಲಿ `ಇಷ್ಟಲಿಂಗ ದೀಕ್ಷೆ’ ನೀಡುವ ಪದ್ಧತಿ ಯನ್ನು ಬೆಳೆಸಿಕೊಂಡು ಬಂದಿದ್ದೇವೆ. ಬಹುತೇಕರಿಗೆ ಲಿಂಗಾಯತ ತತ್ವದ ಅರಿವಿಲ್ಲ. ಅಂಗದ ಮೇಲೆ ಲಿಂಗವನ್ನು ಧರಿಸಿ, ಲಿಂಗವನ್ನಲ್ಲದೆ ಬೇರೆ ದೇವರುಗಳನ್ನು ಪೂಜಿಸದ ವ್ಯಕ್ತಿಯೇ ಲಿಂಗಾಯತ. ಅದೊಂದು ಜಾತಿ ಅಲ್ಲ; ತತ್ವ, ಧರ್ಮ, ಸಿದ್ಧಾಂತ. ನಮ್ಮ ಪರಂಪರೆಯ ಗುರುಗಳು ಲಿಂಗಾಯತ ಧರ್ಮವನ್ನು ಉಳಿಸಲು ಮಾಡಿದ ಪ್ರಯತ್ನವನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದೇವೆ ಎಂದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಚಾರ್ಯ ಐ. ಜಿ. ಚಂದ್ರಶೇಖರಯ್ಯ   ಮಾತನಾಡಿ, ಮಲ್ಲಿಕಾರ್ಜುನ ಶ್ರೀಗಳು ಪ್ರಕೃತಿಯೊಂದಿಗೆ ಬೆರೆತು ಬೆಳೆದವರು.  ಅವರನ್ನು ಕೃಷಿ ಋಷಿಯೆಂದೇ ಕರೆಯಲಾಗುತ್ತಿತ್ತು, ಅವರು ಯೋಗಿಗಳೂ ಹೌದು. ಇಂಥ ಪೂಜ್ಯರ  ಆದರ್ಶಗಳನ್ನು ರೂಢಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.   ಅಧ್ಯಾಪಕ ಜಯಪ್ಪ ಕಾರ್ಯಕ್ರಮ ನಿರೂಪಿಸಿದರು. 

error: Content is protected !!