ಮಹಿಳೆಯರ, ಮಕ್ಕಳ ಪ್ರಕರಣಗಳಲ್ಲಿ ಕಾನೂನಿನ ನೆರವು

ಮಹಿಳೆಯರ, ಮಕ್ಕಳ ಪ್ರಕರಣಗಳಲ್ಲಿ ಕಾನೂನಿನ ನೆರವು

ನ್ಯಾಯಾಧೀಶ ಪ್ರವೀಣ್ ನಾಯ್ಕ

ದಾವಣಗೆರೆ, ಫೆ.23- ಮಹಿಳೆಯರು ಮತ್ತು ಮಕ್ಕಳ ಪ್ರಕರಣಗಳಲ್ಲಿ ಅವರ ಪರವಾಗಿ ಪ್ರಕರಣಗಳನ್ನು ನಡೆಸಲು ಉಚಿತ ಕಾನೂನಿನ ನೆರವು  ಒದಗಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯ್ಕ  ತಿಳಿಸಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಶುಕ್ರವಾರ ಶ್ರೀ ಮೌನೇಶ್ವರಿ  ಶ್ರವಣ ನ್ಯೂನತಾ ವಸತಿಯುತ ಪ್ರೌಢಶಾಲೆಯಲ್ಲಿ ಜರುಗಿದ  ಬಾಲ ನ್ಯಾಯ ಕಾಯ್ದೆ-2015, ಪೋಕ್ಸೋ ಕಾಯ್ದೆ-2012, ಆರ್.ಟಿ.ಇ ಕಾಯ್ದೆ-2009, ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಮತ್ತು ಬಾಲ ಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿರ್ಮೂಲನ ಕಾಯ್ದೆಗಳ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ 3 ಲಕ್ಷ ಆದಾಯಕ್ಕಿಂತ ಕಡಿಮೆ ಇರುವವರಿಗೆ ಪ್ರಕರಣಗಳನ್ನು ನಡೆಸಲು ಸರ್ಕಾರಿ ವಕೀಲರನ್ನು ಕಾನೂನು ಸೇವಾ ಪ್ರಾಧಿಕಾರದಿಂದ ನೇಮಕ ಮಾಡಿಕೊಡಲಾಗುವುದು ಹಾಗೂ ಶ್ರವಣ ನ್ಯೂನತಾ ಮಕ್ಕಳ ಸಾಕ್ಷವನ್ನು ಭಾಷಾ ಅನುವಾದಕರಿಂದ ಪಡೆಯುವ ಅವಕಾಶ ಕಾನೂನಿನಲ್ಲಿದೆ ಎಂದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಿಕಿ ವಾಸಂತಿ ಉಪ್ಪಾರ್ ಅವರು ಬಾಲ್ಯವಿವಾಹ ನಿಷೇಧ ಕಾಯ್ದೆಯ ಕುರಿತು  ಹಾಗೂ ಮಕ್ಕಳ ಸಹಾಯವಾಣಿ 1098 ಬಗ್ಗೆ ಮಾಹಿತಿ ನೀಡಿ ದರು.  ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಕೆ. ಪ್ರಕಾಶ್ ಅವರು ಕಡ್ಡಾಯ ಶಿಕ್ಷಣದ ಬಗ್ಗೆ ತಿಳಿಸಿದರು.  

error: Content is protected !!