ಜ್ಞಾನದೀಪ ಪಬ್ಲಿಕ್ ಶಾಲೆಯಲ್ಲಿ ಪೋಷಕರಿಗೆ ಬಸವಪ್ರಭು ಶ್ರೀಗಳ ಸಲಹೆ
ದಾವಣಗೆರೆ, ಫೆ. 23 – ಭವಿಷ್ಯದಲ್ಲಿ ಮಕ್ಕಳ ಪಾತ್ರ ಬಹು ಮುಖ್ಯವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಉಜ್ವಲ ಭವಿಷ್ಯ ಕಲ್ಪಿಸಿಕೊಳ್ಳಲು ಸಹಕರಿಸಬೇಕು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಶ್ರೀಗಳು ತಿಳಿಸಿದರು.
ನಗರದ ಜ್ಞಾನದೀಪ ಪಬ್ಲಿಕ್ ಶಾಲೆ ವತಿ ಯಿಂದ, ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಿದ್ದ 9ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಪೊಲೀಸ್ ಇನ್ಸ್ಪೆಕ್ಟರ್ ಎಸ್.ಎನ್. ಕಿರಣ್ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಂ. ಕರಿಬಸಪ್ಪ, ಜ್ಞಾನದೀಪ ಪಬ್ಲಿಕ್ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಹೆಚ್.ಕೆ. ಲಿಂಗರಾಜ್ ನಾಯ್ಕ, ಶ್ರೀಶೈಲ ಮಲ್ಲಿಕಾರ್ಜುನ ವಿದ್ಯಾಸಂಸ್ಥೆ ಕಾರ್ಯದರ್ಶಿ ಹಾಗೂ ಜ್ಞಾನದೀಪ ಪಬ್ಲಿಕ್ ಶಾಲೆಯ ಎಸ್ಡಿಎಂಸಿ ನಿರ್ದೇಶಕ ಕೆ. ಪ್ರಭು, ಭರಮಸಾಗರ ಡಿವಿಎಸ್ ಕಾಂಪೋಸಿಟ್ ಹೈಸ್ಕೂಲ್ ಪ್ರಾಂಶುಪಾಲ ಹಾಗೂ ಆಡಳಿತಾಧಿಕಾರಿ ಕೆ.ಜಿ. ಗುರುಸಿದ್ದೇಶ್, ಸಿಆರ್ಪಿ ಭರತ್, ಮಂಜಾನಾಯ್ಕ, ಗಣೇಶ್ಪೇಟೆ ವಿನಾಯಕ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಡಾ. ವೀರೇಶ್ ಬಿರಾದಾರ್ ಮಾತನಾಡಿದರು.
ಶ್ರೀ ಕಾಳಿಕಾ ದೇವಸ್ಥಾನ ಟ್ರಸ್ಟ್ ಉಪಾಧ್ಯಕ್ಷ ಷಣ್ಮುಖಾಚಾರ್, ಎಸ್ಡಿಎಂಸಿ ನಿರ್ದೇಶಕ ಎ.ಎಂ. ಶಿವಕುಮಾರ್, ಈಶ್ವರಾಚಾರ್ ಸಿರಿಗೆರೆ, ಸೋಮಶೇಖರಾಚಾರ್ ತ್ಯಾವಣಿಗೆ, ಕಾರ್ಯದರ್ಶಿ ಚಂದ್ರಶೇಖರ್, ಆರ್ಥಿಕ ಸಲಹೆಗಾರ ಬಿ.ಎಸ್. ಗಿರಿಯಾಚಾರ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶಾಲಾ ನಿರ್ದೇಶಕರಾದ ಮಂಜುಳಾ ಬಸವರಾಜಪ್ಪ ಅವರನ್ನು ಸನ್ಮಾನಿಸಲಾಯಿತು.
ಕಾರ್ಯದರ್ಶಿ ಡಾ. ಕೆ. ಬಸವರಾಜಪ್ಪ ಸ್ವಾಗತಿಸಿದರು. ನಿರ್ದೇಶಕ ಬಿ.ಎಸ್. ಗಿರಿಯಾ ಚಾರ್ ವಂದಿಸಿದರು. ಮು.ಶಿ. ಶ್ರೀಮತಿ ವಿಶಾಲಾಕ್ಷಿ, ನಿರೂಪಿಸಿದರು. ರೂಪಾ, ಎ.ಎಂ. ರಶ್ಮಿ ಪ್ರಾರ್ಥಿಸಿದರು.