ದಾವಣಗೆರೆ, ಫೆ. 23- ಜಯದೇವ ವೃತ್ತದಲ್ಲಿರುವ ಶ್ರೀ ಮಜ್ಜಗದ್ಗುರು ಕೂಡಲೀ ಶೃಂಗೇರಿ ಮಠದಲ್ಲಿ ಮಹಾಶಿವರಾತ್ರಿ ಮಹೋತ್ಸವವು ಶಾಸ್ತ್ರೋಕ್ತವಾಗಿ ನೆರವೇರಿತು. ಜಿಲ್ಲಾ ಪುರೋಹಿತ ಸಂಘದ ಅಧ್ಯಕ್ಷರೂ ಶ್ರೀಮಠದ ಮುಖ್ಯಸ್ಥರಾದ ವೇದಮೂರ್ತಿ ಪವನ್ ಭಟ್‍ರವರ ನೇತೃತ್ವದಲ್ಲಿ ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಪುರೋಹಿತರೂ ಸೇರಿದಂತೆ, ಗಣೇಶ್ ಭಟ್, ಅಜೇಯ ಭಟ್, ಕೃಷ್ಣಭಟ್, ಶ್ರೀಪಾದ ದೇಶಪಾಂಡೆ, ಅನಂತ ಭಟ್, ಗಿರೀಶ್ ಭಟ್, ಅಶೋಕ್ ದಿಕ್ಷೀತ್ ಹಿರಿಯ ಪುರೋಹಿತರಾದ ಜಯತೀರ್ಥಾಚಾರ್, ಆನಂದತೀರ್ಥಾಚಾರ್, ಶ್ರೀ ಗಾಯತ್ರಿ ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ಮುಂತಾದವರು ಉಪಸ್ಥಿತರಿದ್ದರು.
December 23, 2024