ಮಲೇಬೆನ್ನೂರು, ಫೆ.23- ಕೊಕ್ಕನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಮೂಗಿನಗೊಂದಿಯ ಎನ್.ಕೆ.ಆನಂದ್ ಪಟೇಲ್ ಅವರು ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಜಿ.ಟಿ.ಕಟ್ಟಿಯ ಬೀರಪ್ಪ ಅವರ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ದಿಸಿದ್ದ ಆನಂದ್ ಪಟೇಲ್ 14 ಮತಗಳನ್ನು ಪಡೆದು ಆಯ್ಕೆಯಾದರೆ, ಕೊಕ್ಕನೂರಿನ ಕವಿತಾ ಅವರು 7 ಮತಗಳನ್ನು ಪಡೆದು ಪರಾಭವಗೊಂಡರು. ಮಾಜಿ ಅಧ್ಯಕ್ಷರಾದ ಓ.ಬಿ.ನಿಂಗನಗೌಡ, ಜಿ.ಟಿ.ಕಟ್ಟಿ ಬೀರಪ್ಪ ಸೇರಿದಂತೆ ಎಲ್ಲಾ 21 ಜನ ಗ್ರಾ.ಪಂ.ಸದಸ್ಯರು ಈ ವೇಳೆ ಹಾಜರಿದ್ದರು.