ನಿರೀಕ್ಷೆಗೂ ಮೀರಿ ಕೆಲಸ ನಿರ್ವಹಿಸಿ

ನಿರೀಕ್ಷೆಗೂ ಮೀರಿ ಕೆಲಸ ನಿರ್ವಹಿಸಿ

ಗ್ರಾ.ಪಂ. ಸಿಬ್ಬಂದಿಗೆ ನರೇಗಾ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ಪ್ರಕಾಶ್ ಸೂಚನೆ

ಸ್ವೀಪ್ ಕಾರ್ಯಕ್ರಮಗಳು ಎಲ್ಲೆಡೆ ನಡೆಯಲಿ

ಈ ವರ್ಷ ಸಾರ್ವತ್ರಿಕ ಚುನಾವಣೆ ಇರುವುದರಿಂದ ಸ್ವೀಪ್ ಕಾರ್ಯಕ್ರಮಗಳು ಎಲ್ಲೆಡೆ ನಡೆಯಬೇಕು. ಕಸ ಸಂಗ್ರಹಿಸುವ ವಾಹನಗಳಿಗೆ ಬ್ಯಾನರ್ ಮತ್ತು ಪೋಸ್ಟರ್ ಅಳವಡಿಸುವುದು. ನರೇಗಾ ಕಾಮಗಾರಿ ಸ್ಥಳ, ಜಾತ್ರೆ, ಶಾಲಾ-ಕಾಲೇಜುಗಳಲ್ಲಿ ಸ್ವೀಪ್ ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣವಾಗಿ ಆಯೋಜಿಸಬೇಕು.

-ಕೆ.ಆರ್.ಪ್ರಕಾಶ್,  ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ

ಹರಪನಹಳ್ಳಿ, ಫೆ. 23- ವಿಜಯನಗರ ಜಿಲ್ಲೆಯಲ್ಲಿ ಹರಪ ನಹಳ್ಳಿ ತಾಲ್ಲೂಕು ದೊಡ್ಡದಿದ್ದು, ಇಲ್ಲಿ ಹೆಚ್ಚು ಗ್ರಾ.ಪಂ. ಗಳು ಇರುವುದರಿಂದ ಮೇಲಾಧಿಕಾರಿ ಗಳು ಗಮನ ಹರಿಸುತ್ತಾರೆ. ಆದ್ದರಿಂದ ನಿರೀಕ್ಷೆಗೂ ಮೀರಿ ಎಲ್ಲರೂ ಕೆಲಸ ನಿರ್ವಹಿಸಬೇಕು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ಪ್ರಕಾಶ್ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು.

ಪಟ್ಟಣದ ತಾ.ಪಂ. ಕಚೇರಿಯ ರಾಜೀವ್‌ಗಾಂಧಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿಬ್ಬಂದಿಗಳು ಬೆಳಗ್ಗೆ ಕಚೇರಿಗೆ ಬಂದ ಕೂಡಲೇ ಆಯಾ ಗ್ರಾಮ ಪಂಚಾಯಿತಿಯಲ್ಲಿ ಆಗಬೇಕಾದ ಪ್ರಗತಿ ಬಗ್ಗೆ ವರದಿ ಪಡೆದು ನಮ್ಮಲ್ಲಿ ಸಲ್ಲಿಸಬೇಕು. ಯಾವ ಪಂಚಾಯಿತಿಯ ಪ್ರಗತಿ ಕುಂಠಿತ ಇರುತ್ತದೆಯೋ ಅಂತಹ  ಗ್ರಾ.ಪಂ.ನ ಪಿಡಿಒ ಅಥವಾ ಯಾರಿಂದ ಪ್ರಗತಿ ಕುಂಠಿತಗೊಂಡಿದೆಯೋ ಅಂಥವರ ವಿರುದ್ಧ ಕ್ರಮಕೈಗೊಳ್ಳಲು ಮೇಲಾಧಿಕಾರಿಗಳಿಗೆ ಹೆಸರನ್ನು ಕಳಿಸಲಾಗುವುದು ಎಂದು ತಿಳಿಸಿದರು.

ಅರಸೀಕೆರೆಯಲ್ಲಿ ಎಸ್‍ಎಲ್‍ಡಬ್ಲ್ಯುಎಂ ಘಟಕದ ಕಾಮಗಾರಿಯನ್ನು ಯಾವುದೇ ನೆಪ ಹೇಳದೆ ಕೂಡಲೇ ಆರಂಭಿಸಬೇಕು. ಇನ್ನು ತಾಂತ್ರಿಕ ಸಹಾಯಕ ಇಂಜಿನಿಯರ್‍ಗಳು ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಸಮಸ್ಯೆಗಳು ನಿಮ್ಮ ಬಳಿ ಉಳಿದರೆ ಪ್ರಗತಿ ಅಸಾಧ್ಯ. ಆದ್ದರಿಂದ ಎಲ್ಲರೂ ಇದನ್ನು ಅರ್ಥ ಮಾಡಿಕೊಂಡು ಕೆಲಸ ನಿರ್ವಹಿಸಿ ಎಂದು ತಿಳಿಸಿದರು.

ನರೇಗಾ ಸಹಾಯಕ ನಿರ್ದೇಶಕ ಚಂದ್ರನಾಯ್ಕ ಎಲ್.ಮಾತನಾಡಿ, ನರೇಗಾ ಕ್ರಿಯಾ ಯೋಜನೆಯಲ್ಲಿ ಎಲ್ಲ ವರ್ಗದ ಕಾಮಗಾರಿಗಳನ್ನು ಸೇರ್ಪಡೆ ಮಾಡಬೇಕು ಎಂದರು. ನಿಟ್ಟೂರು, ಮಾಡ್ಲಗೆರೆ ಹಾಗೂ ಹಲುವಾಗಲು ಪಂಚಾಯತಿ ಯಲ್ಲಿ ನಮೂನೆ-6 ಸಲ್ಲಿಸಿದರೂ ಕೆಲಸ ನೀಡುತ್ತಿಲ್ಲ ಎಂದು ಕೂಲಿ ಕಾರ್ಮಿಕರಿಂದ ದೂರುಗಳು ಬರುತ್ತಿವೆ. ಆದ್ದರಿಂದ ಈ ರೀತಿಯ ದೂರುಗಳು ಕೇಳಿ ಬಂದರೆ ಸುಮ್ಮನಿರಲು ಸಾಧ್ಯವಿಲ್ಲ. ಕೂಡಲೇ ಎನ್‍ಎಂಆರ್ ತೆಗೆಯಲು ಗ್ರಾ.ಪಂ. ಸಿಬ್ಬಂದಿಗೆ ಸೂಚಿಸಿದರು. ಇನ್ನು ಜಲಸಂಜೀವಿನಿ, ನರೇಗಾ ಕ್ರಿಯಾಯೋಜನೆ, ನರೇಗಾ ಕೂಲಿಕಾರ್ಮಿಕರ ಆಧಾರ್ ಅಪ್‌ಡೇಟ್‌ ಶೀಘ್ರ ಮುಗಿಸಬೇಕು ಎಂದು ತಿಳಿಸಿದರು.

ತಾಲ್ಲೂಕು ಯೋಜನಾಧಿಕಾರಿ ಎನ್.ವಿ.ನವೀನ್ ಕುಮಾರ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್ ಮಾತನಾಡಿ, ಪಂಚತಂತ್ರ 2.0 ಇ-ಅಟೆಂಡೆನ್ಸ್, ಕಸದ ವಾಹನ, ವಸತಿಯೋಜನೆ, ಸಾರ್ವಜನಿಕ ದೂರುಗಳು, ಅಡ್‍ಹಾಕ್ ಸಮಿತಿ ಸೇರಿ ವಿವಿಧ ವಿಷಯಗಳು ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ತಾ.ಪಂ. ಕಚೇರಿ ವ್ಯವಸ್ಥಾಪಕ ದಾದಾಪೀರ್, ತಾಂತ್ರಿಕ ಸಂಯೋಜಕ ನಾಗರಾಜ ನಾಯ್ಕ, ತಾಲ್ಲೂಕು ಐಇಸಿ ಸಂಯೋಜಕ ವಸಿಗೇರಪ್ಪ ಚಾಗನೂರು, ಎಂಐಎಸ್ ಸಂಯೋಜಕ ಮೈಲಾರಿಗೌಡ ಮತ್ತು ಇತರರು  ಹಾಜರಿದ್ದರು.

error: Content is protected !!