ಕರ್ನಾಟಕ ಹಡಪದ ನಿಗಮ ಸ್ಥಾಪನೆ : ಹರ್ಷ

ದಾವಣಗೆರೆ, ಫೆ.22 – ಕರ್ನಾಟಕ ಹಡಪದ ಸಮಾಜದ 20 ವರ್ಷಗಳ ಹೋರಾಟದ ಫಲವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ನೇತೃತ್ವದ ಸರ್ಕಾರ §ಕರ್ನಾಟಕ ಹಡಪದ ಅಭಿವೃದ್ಧಿ ನಿಗಮ¬ ಸ್ಥಾಪನೆಗೆ ಆದೇಶ ಹೊರಡಿಸಿದ್ದು, ಜಿಲ್ಲಾ ಹಡಪದ ಸಮಾಜ ಸ್ವಾಗತಿಸಿದೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಸಮಾಜದ ಮುಖಂಡರು ಮಾತನಾಡಿದರು. ನಿಗಮ ಸ್ಥಾಪನೆಗಾಗಿ ಅನ್ನದಾನಭಾರತಿ ಅಪ್ಪಣ್ಣ ಸ್ವಾಮೀಜಿ ಹಾಗೂ ಹಡಪದ ಸಮಾಜದ ರಾಜ್ಯ ಮಟ್ಟದ ಮುಖಂಡರು ಸಾಕಷ್ಟು ಹೋರಾಟ ಮಾಡಿದ್ದು, ಅವರ ಹೋರಾಟದ ಫಲವಾಗಿ ಸರ್ಕಾರ ನಿಗಮ ಸ್ಥಾಪಿಸಿದೆ.  ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಜೂರು ಮಾಡಿದ್ದು ಸಂತಸ ತಂದಿದೆ. ಬಹುದಿನಗಳ ಬೇಡಿಕೆ ಈಡೇರಿದೆ. ಇದರಿಂದ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಪೂರಕವಾಗಿದೆ. ಆದ್ದರಿಂದ ಮಾರ್ಚ್ ಕೊನೆಯ ವಾರ ನಗರದ ಶಿವಯೋಗಿ ಮಂದಿರದಲ್ಲಿ ಸ್ವಾಮೀಜಿ ಹಾಗೂ ಸಮಾಜದ ರಾಜ್ಯ ಮುಖಂಡರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗುವುದು ಎಂದು ಹಡಪದ ಸಮುದಾಯದ ಮುಖಂಡ ಡಾ.ಎನ್‌.ಜೆ.ಶಿವಕುಮಾರ್ ಹೇಳಿದರು.

 ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಹಡಪದ ಸಮಾಜದ ಅಧ್ಯಕ್ಷ ಹೆಚ್.ಶಶಿಧರ್ ಬಸಾಪುರ, ಹಾಲೇಶ್ ಹರಿಹರ, ಅಜ್ಜಪ್ಪ ಕೊಮಾರನಹಳ್ಳಿ, ಗಣೇಶ್ ಭಾನುವಳ್ಳಿ, ಸಿದ್ದೇಶ್, ಚಿಕ್ಕಿರೇಶ್, ಬಸವರಾಜ್, ವೀರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!