ದಿಢೀರ್ ಬಂದವರಿಗೆ ಟಿಕೆಟ್ ಸಿಗುವುದಿಲ್ಲ

ದಿಢೀರ್ ಬಂದವರಿಗೆ ಟಿಕೆಟ್ ಸಿಗುವುದಿಲ್ಲ

ಜಗಳೂರು; ಪಕ್ಷಕ್ಕೆ ದುಡಿದವರಿಗೆ ಅವಕಾಶ : ಶಾಸಕ ಎಸ್. ವಿ. ರಾಮಚಂದ್ರ

ಜಗಳೂರು, ಫೆ.19- ಯಾರು ಪಕ್ಷಕ್ಕೆ ದುಡಿದಿರುತ್ತಾರೋ ಅಂತವ ರನ್ನು ಪಕ್ಷ ಗುರುತಿಸುವಂತಹ ಕೆಲಸ ಮಾಡುತ್ತಿದೆ. ದಿಢೀರ್  ಬಂದವರಿಗೆ  ಟಿಕೆಟ್  ದೊರೆಯುವುದಿಲ್ಲ  ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ಭಾನುವಾರ ಪಟ್ಟಣದ ಗುರುಭವನದಲ್ಲಿ  ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ವಿಧಾನಸಭಾ ಕ್ಷೇತ್ರದ ವೀಕ್ಷಕರ ಪರಿಚಯ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

1336 ಕೋಟಿ ರೂ. ವೆಚ್ಚದ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಇನ್ನೂ 15 ದಿನಗಳಲ್ಲಿ ಕಾಮಗಾರಿಗೆ ಮಾನ್ಯ ಮುಖ್ಯ ಮಂತ್ರಿಗಳು ಇಲ್ಲವೇ ಸಚಿವರನ್ನು ಕರೆಸಿ   ಭೂಮಿ ಪೂಜೆ ಮಾಡಿಸ ಲಾಗುವುದು. ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಕೊಡಲಾಗುತ್ತಿದೆ. ಆದರೆ ಪ್ರಚಾರದ ಕೊರತೆ ಇದೆ. ಯೋಜನೆಗಳ ಬಗ್ಗೆ ಜನತೆಯ ಮನೆ, ಮನೆಗೆೆ ತೆರಳಿ ಕಾರ್ಯಕ ರ್ತರು ತಿಳಿಸುವಂತಹ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕ್ಷೇತ್ರದಲ್ಲಿ ಅಣ್ಣ-ತಮ್ಮಂದಿರಿಗೆ ಜಗಳವಿಟ್ಟ ವನಲ್ಲ ಮತ್ತು ಹೆಗಲ ಮೇಲೆ ಕೈ ಹಾಕಿಕೊಂಡು ಮಾತ ನಾಡಿ ಆಸೆ ಹುಟ್ಟಿಸುವವನಲ್ಲ, ಕೊಟ್ಟ ಮಾತನ್ನು ನಡೆಸುವಂತ ವನು.  ಎರಡು ಬಾರಿ ಸಿಎಂ ಕರೆಸಿ  ಬೃಹತ್ ಕಾರ್ಯಕ್ರಮ ಮಾಡಿದ್ದೇನೆ  ಮತ್ತು ಕಬಡ್ಡಿ ಕ್ರೀಡಾಕೂಟವನ್ನು ಆಯೋಜಿಸಿ ದ್ದೇನೆ ಎಂದರು.  ಎಸ್ಟಿ ನಿಗಮದ ಅಧ್ಯಕ್ಷನಾಗಿದ್ದರಿಂದ  ಈಗ 200 ಮೋಟರ್ ಸೈಕಲ್‌ಗಳನ್ನು ಅರ್ಹರಿಗೆ ಕೊಡುತ್ತೇವೆ. ನಿಗಮದ ವತಿಯಿಂದ  600 ಬೋರ್‌ವೆಲ್ ಕೊಡಿಸಲಾಗಿದೆ  ಎಂದು ಶಾಸಕರು ಹೇಳಿದರು.

ವಿಧಾನಸಭಾ ಕ್ಷೇತದ ವೀಕ್ಷಕ ಆರುಂಡಿ ನಾಗರಾಜ್  ಮಾತನಾಡಿ, ಇಡೀ ವೀಶ್ವವೇ ಭಾರತದತ್ತ ತಿರುಗಿ ನೋಡುವಂತೆ ಪ್ರಧಾನ ಮಂತ್ರಿ ಮಾಡಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತಿಳಿಸಬೇಕು ಎಂದರು.

ಕ್ಷೇತ್ರದಲ್ಲಿ ಬೂತ್ ಮಟ್ಟದ ಕಮಿಟಿ ಮಾಡಬೇಕಾಗಿದೆ. ಈ ಕಮಿಟಿಯವರು ಶೇ.50 ರಷ್ಟು ಮತಗಳನ್ನು ಪಡೆದುಕೊಂಡರೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷ ಜಯ ಗಳಿಸಲಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೊಕ್ಕೆ ನಾಗರಾಜ್ ಮಾತನಾಡಿ, ರಾಜ್ಯದ 224 ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಿದ್ದಾರೆ ಆದರೆ ಜಗಳೂರಿಗೆ ಮಾಡಿರಲಿಲ್ಲ. ಪಕ್ಷ ಈಗ ಆರುಂಡಿ ನಾಗರಾಜ್ ಅವರನ್ನು ನೇಮಕ ಮಾಡಿದೆ, ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿಯೇ  ಜಗಳೂರು  ವಿಧಾನಸಭಾ ಕ್ಷೇತ್ರ  ಎ ಗ್ರೇಡ್ ನಲ್ಲಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ  ಪಲ್ಲಾಗಟ್ಟೆ ಮಹೇಶ್ ಮಾತನಾಡಿ, ನನಗೆ ಟಿಕೆಟ್ ದೊರೆಯುತ್ತದೆ ಎಂದು ಹೇಳಿಕೊಂಡು ಬರುವ  ಆಕಾಂಕ್ಷಿಗಳನ್ನು  ನಂಬಬೇಡಿ, ಟಿಕೆಟ್ ನೀಡುವುದು  ಹೈ-ಕಮಾಂಡ್.  ಪಕ್ಷದಲ್ಲಿ  ದುಡಿದವರಿಗೆ ಮಾತ್ರ  ಟಕೆಟ್ ದೊರೆಯುತ್ತದೆ. ಬಿಜೆಪಿಯಿಂದ ಹಾಲಿ ಶಾಸಕರೇ ಏಕೈಕ ಆಭ್ಯರ್ಥಿಯಾಗಿದ್ದಾರೆ ಎಂದರು.

 ಈ ವೇಳೆ  30ಕ್ಕೂ ಅಧಿಕ   ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ  ಡಿ.ವಿ.ನಾಗಪ್ಪ, ಜಿ.ಪಂ ಮಾಜಿ ಸದಸ್ಯ ಮಂಜುನಾಥ್,  ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾ,  ಶಿವಕುಮಾರ್ ಸ್ವಾಮಿ, ಬಿಸ್ತುವಳ್ಳಿ ಬಾಬು, ಸಿದ್ದೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ತಿಪ್ಪೇಸ್ವಾಮಿ, ಪಾಪಲಿಂಗಪ್ಪ, ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರುಗಳು ಕಾರ್ಯಕರ್ತರು ಭಾಗವಹಿಸಿದ್ದರು.

error: Content is protected !!