ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ದೇವೇಂದ್ರಯ್ಯ

ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ದೇವೇಂದ್ರಯ್ಯ

ಸಾಸ್ವೆಹಳ್ಳಿ, ಫೆ.19 – ಹಲವಾರು ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ತಮ್ಮ ಕಾರ್ಯದಲ್ಲಿ ನಾವು ತೊಡಗಿಕೊಂಡಿರಬೇಕು. ಒಂದಲ್ಲ ಒಂದು ದಿನ ನಮ್ಮ ಕೆಲಸ, ಕಾರ್ಯಗಳನ್ನು ಸಮಾಜ ಗುರುತಿಸಿ ಗೌರವಿಸುತ್ತದೆ. ಇದಕ್ಕೆ ಕೆ.ಪಿ. ದೇವೇಂದ್ರಯ್ಯ ಉತ್ತಮ ಉದಾಹರಣೆ ಎಂದು ಬೇಡ ಜಂಗಮ ಸಮಾಜದ ಮುಖಂಡ ಎಚ್.ಎಂ. ಗಂಗಾಧರಯ್ಯ ಹೇಳಿದರು. 

ಹೊನ್ನಾಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಪಿ. ದೇವೇಂದ್ರಯ್ಯನವರನ್ನು ಸಾಸ್ವೆಹಳ್ಳಿಯಲ್ಲಿ ಅವರ ಮನೆಯಲ್ಲಿ ಗೌರವಿಸಿ ಅವರು ಮಾತನಾಡಿದರು. 

ಅವರು ಎರಡು ಕವನ ಸಂಕಲನ, ಒಂದು ಕಾದಂಬರಿ ಹಾಗೂ ಸ್ಥಾವರಕ್ಕೆ ಅಳಿವುಂಟು ಎಂಬ ಸಂಕಲನವನ್ನು ಬಿಡುಗಡೆ ಮಾಡಿದ್ದಾರೆ. ಅವರ ಕೃತಿಗಳು ಇಂದಿಗೂ ಹಲವು ಮಜಲುಗಳನ್ನು ತೆರೆದಿಡುತ್ತದೆ ಎಂದರು. 

ಎಲೆ ಮರೆಯ ಕಾಯಿಯಂತೆ ಕಾಯಕವೇ ಕೈಲಾಸ ಮೈಗೂಡಿಸಿಕೊಂಡಿರುವ ಅವರಿಗೆ ದಾವಣಗೆರೆ ಜಿಲ್ಲಾ ಗ್ರಾಮೀಣ ಸಿರಿ ಪ್ರಶಸ್ತಿ, ಕರುಣಾಳು ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಸಿದ್ಧಗಂಗಾ ಶಿವಕುಮಾರ ಪ್ರಶಸ್ತಿ ಹಾಗೂ ರಾಮದುರ್ಗದಲ್ಲಿ ಮೌಲ್ಯ ಸಾಹಿತ್ಯ ಸಂಪದ ವತಿಯಿಂದ ರಾಜ್ಯ ಸಾಹಿತ್ಯ ಪ್ರಶಸ್ತಿಗಳು ಲಭಿಸಿವೆ. ಅವರ ವಿಚಾರಧಾರೆಯು ಇನ್ನೂ ಹೆಚ್ಚು ಬೇಕಾಗಿದೆ ಎಂದು ನ್ಯಾಮತಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎಸ್. ಶಾಸ್ತ್ರೀ ಹೊಳೆಮಠ್ ಹೇಳಿದರು. 

ಕನ್ನಡ ಶ್ರೀಮಂತ ಭಾಷೆ ಇದನ್ನು ಜಗತ್ತಿಗೆ ತಂತ್ರಜ್ಞಾನದ ಮೂಲಕ ತಿಳಿಸುವ ಜವಾಬ್ದಾರಿಯಿಂದ ತಿಳಿದವರಿಂದ ಇನ್ನೂ ಹೆಚ್ಚು ಪ್ರಚಾರದ ಅವಶ್ಯಕತೆ ಇದೆ ಎಂದು ಹೊನ್ನಾಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಕೆ.ಪಿ. ದೇವೇಂದ್ರಯ್ಯ ಹೇಳಿದರು. 

ಈ ಸಂದರ್ಭದಲ್ಲಿ ಕೆ.ಎಂ. ಪರಮೇಶ್ವರಯ್ಯ, ಮುರುಗೇಂದ್ರಯ್ಯ, ಬಸವರಾಜಯ್ಯ, ಪಂಚಾಕ್ಷರಯ್ಯ, ಲೋಕಯ್ಯ, ನಟರಾಜ ಸ್ವಾಮಿ, ಶಿವಲಿಂಗಯ್ಯ, ಗುರು ಪ್ರಸಾದ್, ನಂಜುಡಯ್ಯ ಇದ್ದರು.

error: Content is protected !!