ಧಾರ್ಮಿಕ ಸಂಸ್ಥೆ ದತ್ತಿಗಳ ಇಲಾಖೆ ಆದೇಶ ಪಾಲಿಸದ ಜಿಲ್ಲಾಧಿಕಾರಿ : ದೂರು

ದಾವಣಗೆರೆ, ಫೆ.19- ಹೈಸ್ಕೂಲ್ ಮೈದಾನದ ಬಳಿಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಹೋಗುವಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾ ದಾಯ ದತ್ತಿ ಇಲಾಖೆಯ ಆಯುಕ್ತರು ಆದೇಶಿಸಿ ದ್ದರೂ, ಜಿಲ್ಲಾಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಅರ್ಚಕರ ಕುಟುಂಬ ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನದ ಅರ್ಚಕರ ಕುಟುಂಬದ ಬಿ.ಜಿ ಶಿವಯೋಗಿ, ದೇವಸ್ಥಾನ ಕಮಿಟಿಯವರು ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಅರ್ಚಕರ ಕೆಲಸದಿಂದ ವಜಾ ಗೊಳಿಸಿದ್ದರು.  ಧಾರ್ಮಿಕ ದತ್ತಿ ಇಲಾಖೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನಮ್ಮ ಮೇಲಿನ ಆರೋಪಗಳು ಸುಳ್ಳೆಂದು ಸಾಬೀತಾಗಿ ಪುನಃ ಅರ್ಚಕ ಹುದ್ದೆಗೆ ನೇಮಿಸಿಕೊಳ್ಳಲು ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಇಲಾಖೆಯ ಆದೇಶ ಪಾಲಿಸದೆ ಅಗೌರವ ತೋರಿದ್ದಾರೆ ಎಂದು ದೂರಿದರು.

 ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಅರ್ಚಕ ಬಿ.ಜಿ. ಲಿಂಗೇಶ್, ಪೂಜಾರ್ ವಂಶಸ್ಥರಾದ ಶಂಕರಪ್ಪ, ಸವಿತಮ್ಮ ಟಿ.ಇ., ಸುನಿತ, ಹನುಮಂತಪ್ಪ, ಕರಿಯಪ್ಪ ಇತರರು ಉಪಸ್ಥಿತರಿದ್ದರು.

error: Content is protected !!