ಬ್ರಾಹ್ಮಣ ಸೇವಾ ಸಂಘದಿಂದ ವಸ್ತು ಪ್ರದರ್ಶನ, ಆಹಾರ ಮೇಳ

ಬ್ರಾಹ್ಮಣ ಸೇವಾ ಸಂಘದಿಂದ ವಸ್ತು ಪ್ರದರ್ಶನ, ಆಹಾರ ಮೇಳ

ದಾವಣಗೆರೆ, ಫೆ. 19 – ನಗರದ ಬ್ರಾಹ್ಮಣ ಸೇವಾ ಸಂಘದ ವತಿಯಿಂದ ಒಂದು ದಿನದ ವಸ್ತು ಪ್ರದರ್ಶನ, ಮಾರಾಟ ಮತ್ತು ಆಹಾರ ಮೇಳ ಇಂದು ನಡೆಯಿತು.

ಶಂಕರ ಸಮುದಾಯ ಭವನದಲ್ಲಿ ‘ಸ್ಫೂರ್ತಿ 2023’ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 40 ಸ್ಟಾಲ್‌ಗಳಲ್ಲಿ ವಿವಿಧ ವಸ್ತುಗಳನ್ನು ಮಾರಾಟಕ್ಕೆ ಇರಿಸಲಾಗಿತ್ತು. ಉದ್ಯಮಶೀಲತೆಗೆ ಪ್ರೋತ್ಸಾಹ ನೀಡಲು ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಡಾ. ಎಂ.ಸಿ. ಶಶಿಕಾಂತ್ ತಿಳಿಸಿದ್ದಾರೆ.

error: Content is protected !!