ದಾವಣಗೆರೆ, ಫೆ.16- ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಆರ್. ಮಂಜುನಾಥ್ ಹಾಗೂ ನಗರ ಯೋಜನೆ ವಿಭಾಗದ ಭರತ್ ಲಂಚ ಸ್ವೀಕರಿಸುವಾಗ ಲೋಕಾಯು ಕ್ತರ ಬಲೆಗೆ ಬಿದ್ದಿದ್ದಾರೆ.
ಹರಿಹರ ತಾಲ್ಲೂಕಿನ ಶ್ರೀನಿವಾಸ್ ಎಂಬುವವರು ತಮ್ಮ ಜಮೀನಿನಲ್ಲಿ ಬಡಾ ವಣೆ ನಿರ್ಮಾಣ ಮಾಡಲು ಬಯಸಿದ್ದರು. ಅದಕ್ಕೆ ಸಂಬಂ ಧಿಸಿದಂತೆ ಪರವಾ ನಿಗೆ, ನಕ್ಷೆ ಮಾಡಿಕೊಡಲು ಮೂರು ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತು. ಮೊದಲ ಕಂತಿನಲ್ಲಿ ಒಂದು ಲಕ್ಷ ಹಣ ನೀಡಲಾಗಿತ್ತು, ಇಂದು ಉಳಿದ ಎರಡು ಲಕ್ಷ ರೂ. ಹಣ ನೀಡುವಾಗ ಲೋಕಾಯುಕ್ತ ಅಧಿ ಕಾರಿಗಳು ಇಬ್ಬರನ್ನೂ ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ.
ಶ್ರೀನಿವಾಸ್ ದಾವಣಗೆರೆಯ ಶ್ರೀರಾಮ ಸೇನೆಯ ಕಾರ್ಯಕರ್ತರಾಗಿದ್ದು, ಅಧಿಕಾರಿಗಳ ಲಂಚಕ್ಕೆ ಬೇಸತ್ತು ದೂರು ನೀಡಿದ್ದರು. ಇವರ ದೂರನ್ನು ಪರಿಶೀಲಿಸಿ ಲೋಕಾಯುಕ್ತರು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.