ದಾವಣಗೆರೆ, ಫೆ. 15- ವೃತ್ತಿ ರಂಗಭೂಮಿ ರಂಗಾಯಣ, ಚಿರಂತನ ಸಂಸ್ಥೆ (ದಾವಣಗೆರೆ) ಮತ್ತು ಗುರು ಇನ್ಸ್ಟಿಟ್ಯೂಟ್ (ಹುಬ್ಬಳ್ಳಿ) ಇವರ ಸಂಯುಕ್ತಾಶ್ರಯದಲ್ಲಿ ರಂಗಶಿವರಾತ್ರಿ- 2023 ಎಂಬ ಶೀರ್ಷಿಕೆಯಡಿ ನಾಲ್ಕುದಿನ ನಾಲ್ಕು ನಗೆ ನಾಟಕಗಳ ಪ್ರಸ್ತುತಿ `ರಂಗೋತ್ಸವ’ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 17 ರಿಂದ 20 ರವರೆಗೆ ನಗರದ ಚಿಂದೋಡಿ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ.
ಪ್ರತಿ ದಿನ ಸಂಜೆ 6.30 ಕ್ಕೆ ನಾಟಕ ಪ್ರದರ್ಶನವಿದೆ. ನಾಡಿದ್ದು ದಿನಾಂಕ 17 ರ ಶುಕ್ರವಾರ `ರಾಶಿ ಚಕ್ರ’ ಏಕ ವ್ಯಕ್ತಿ ಹಾಸ್ಯ ರಂಗ ಪ್ರಯೋಗ, ದಿನಾಂಕ 18 ರಂದು `ಆಲ್ ದಿ ಬೆಸ್ಟ್’ ಸುಂದರ ಕನ್ನಡ ನಗೆ ನಾಟಕ, ಫೆ. 19 ಮತ್ತು 20 ರಂದು `ಸೂಪರ್ ಸಂಸಾರ’ ಹೊಚ್ಚ ಹೊಸ ನಗೆ ನಾಟಕ ಪ್ರದರ್ಶನಗೊಳ್ಳಲಿದೆ.
ಲವ್ಫುಡ್, ರಸವಂತಿ ಕೂಲ್ ಡ್ರಿಂಕ್ಸ್, ಹಳೆಮನೆ ಹೋಟೆಲ್, ಆಹಾರ್-2000 , ಚಿರಂತನ ಸಂಸ್ಥೆಯಲ್ಲಿ ಟಿಕೆಟ್ಗಳು ಲಭ್ಯವಿವೆ.