ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಶ್ರದ್ಧೆ, ಗುರಿ ಮುಖ್ಯ: ನಾರಾಯಣಸ್ವಾಮಿ

ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಶ್ರದ್ಧೆ, ಗುರಿ ಮುಖ್ಯ: ನಾರಾಯಣಸ್ವಾಮಿ

ದಾವಣಗೆರೆ, ಫೆ. 14- ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಗುರಿ ಇಟ್ಟುಕೊಂಡು ವ್ಯಾಸಂಗ ಮಾಡಬೇಕು. ಮುಂಬರುವ ವಾರ್ಷಿಕ ಪರೀಕ್ಷೆಯಲ್ಲಿ ಧೈರ್ಯವಾಗಿ ಪರೀಕ್ಷೆ ಎದುರಿಸಿ, ಉತ್ತಮ ಅಂಕಗಳನ್ನು ಪಡೆದು ಸಮಾಜಕ್ಕೆ, ಕುಟುಂಬಕ್ಕೆ ಆದರ್ಶ ವಿದ್ಯಾರ್ಥಿಗಳಾಗಿ ಬೆಳೆಯಿರಿ ಎಂದು ಸರ್ಕಾರದ ಮುಖ್ಯ ಸಚೇತಕ ಡಾ. ವೈ.ಎ. ನಾರಾಯಣಸ್ವಾಮಿ ಹೇಳಿದರು.

ನಗರದ ಮೌಂಟ್ ಎವರೆಸ್ಟ್ ವಿದ್ಯಾಲಯದಲ್ಲಿ 2 ಲಕ್ಷ ರೂ. ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಇದೇ ವೇಳೆ ನಾರಾಯಣಸ್ವಾಮಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಡಾ.ವೈ.ಎ.ಎನ್. ಬಳಗದ ಸಾಂಬಶಿವಯ್ಯ, ಬಿ.ಎನ್. ರಾಮರೆಡ್ಡಿ, ಶಾಲಾ ಸಂಸ್ಥಾಪಕ ತ್ಯಾವಣಗಿ ವೀರಭದ್ರಸ್ವಾಮಿ, ಹಾಲೇಶಪ್ಪ, ಪದ್ಧಪ್ಪ, ಶಾಲಾ ಮುಖ್ಯ ಶಿಕ್ಷಕಿ ನಯನ ವಿ. ಸ್ವಾಮಿ, ಓಂಕಾರಪ್ಪ, ಚೇತನಕುಮಾರ್ ಮತ್ತಿತರರು ಇದ್ದರು.

error: Content is protected !!