ದಾವಣಗೆರೆ, ಫೆ. 12- ಕರ್ನಾಟಕ ರಾಜ್ಯ ಬ್ಯಾಸ್ಕೆಟ್ಬಾಲ್ ಸಂಸ್ಥೆ ಹಾಗೂ ಜಿಲ್ಲಾ ಬಾಸ್ಕೆಟ್ಬಾಲ್ ಸಂಸ್ಥೆ ಸಂಯು ಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗ ಣದಲ್ಲಿ ಕರ್ನಾಟಕ ಬಾಸ್ಕೆಟ್ ಬಾಲ್ ಲೀಗ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಮತ್ತು ಬಳ್ಳಾರಿಯ ಬಾಸ್ಕೆಟ್ಬಾಲ್ ತಂಡ ಗಳು ಈ ಒಂದು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಲೀಗ್ ಹಂತದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ಹಾಗೂ ಶಿವಮೊಗ್ಗ ಬಾಸ್ಕೆಟ್ ಬಾಲ್ ಕ್ಲಬ್ ತಂಡಗಳು ಫೈನಲ್ ತಲುಪಿದವು.
ರೋಮಾಂಚನಕಾರಿಯಾಗಿ ಕೂಡಿದ್ದ ಫೈನಲ್ ಪಂದ್ಯದಲ್ಲಿ ಶಿವಮೊಗ್ಗ ತಂಡವು ಒಂದು ಅಂಕದಿಂದ (55-54) ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿತು. ದಾವಣಗೆರೆ ತಂಡವು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
3ನೇ ಸ್ಥಾನವನ್ನು ಬಳ್ಳಾರಿ ಬಾಸ್ಕೆಟ್ ಬಾಲ್ ಕ್ಲಬ್ ತನ್ನದಾಗಿಸಿ ಕೊಂಡಿತು. ಇದೇ ಸಂದರ್ಭದಲ್ಲಿ 16 ವರ್ಷ ವಯೋ ಮಿತಿ ಒಳಗಿನ ಬಾಲಕರ ಮತ್ತು ಬಾಲಕಿ ಯರ ಆಹ್ವಾನಿತ ಲೀಗ್ ಪಂದ್ಯವನ್ನು ಕೂಡ ಆಯೋಜಿಸಲಾಗಿತ್ತು. ಎರಡೂ ವಿಭಾಗದಲ್ಲೂ ದಾವಣಗೆರೆ ತಂಡಗಳು ಮೊದಲನೇ ಸ್ಥಾನ ಹಾಗೂ ಹೊಸಪೇಟೆ ತಂಡಗಳು ದ್ವಿತೀಯ ಸ್ಥಾನ ಪಡೆದವು.
ಫೈನಲ್ ತಲುಪಿದ ಎರಡೂ ತಂಡ ಗಳು ಬೆಂಗಳೂರಿನಲ್ಲಿ ನಡೆಯುವ ಫೈನಲ್ ಹಂತದ ಲೀಗ್ ಪಂದ್ಯಾವಳಿ ಯಲ್ಲಿ ಭಾಗ ವಹಿಸಲು ಅರ್ಹತೆ ಪಡೆದು ಕೊಂಡವು. ಪಂದ್ಯಾವಳಿಯ ಅತ್ಯುತ್ತಮ ಶೂಟರ್ ಆಗಿ ಶಿವಮೊಗ್ಗ ತಂಡದ ಅನಿಲ್ ರಾಜ್ ಅವರು ಹಾಗೂ ಪಂದ್ಯಾವಳಿಯ ಅತ್ಯುತ್ತಮ ಆಟಗಾರನಾಗಿ ದಾವಣಗೆರೆಯ ರವಿರಾಜ್ ಅವರು ಆಯ್ಕೆಗೊಂಡರು.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಮಂಜುನಾಥ ಗಡಿಗುಡಾಳ್, ಹಿರಿಯ ಬಾಸ್ಕೆಟ್ಬಾಲ್ ಕ್ರೀಡಾಪಟು ಗಳಾದ ಸಂಗಪ್ಪ, ಶಾಂತಿನಾಥ್ ಬೋಂದಾಡೆ, ರವಿ ಪಲ್ಲಾಗಟ್ಟಿ, ವಿಜಯ್ ಕುಮಾರ್ ಹಾಗೂ ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಗುಣಶೇಖರ್ ಹಾಜರಿದ್ದು, ಗೆದ್ದ ತಂಡ ಗಳಿಗೆ ಹಾಗೂ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಾಸ್ಕೆಟ್ ಬಾಲ್ ಸಂಸ್ಥೆ ಸಹ ಕಾರ್ಯದರ್ಶಿ ದೇವಗಿರಿ ಪ್ರಭಾಕರ್ ಸ್ವಾಗತಿಸಿದರು. ದಾವಣಗೆರೆ ಜಿಲ್ಲಾ ಬಾಸ್ಕೆಟ್ಬಾಲ್ ಸಂಸ್ಥೆಯ ಕ್ರೀಡಾ ಪಟು ರವಿರಾಜ್ ಅವರು ಬಾಸ್ಕೆಟ್ಬಾಲ್ ಲೀಗ್ ಪ್ರಾರಂಭಿಸಿದ ಗೋವಿಂದರಾಜ್ ಅವರ ಬಗ್ಗೆ ಹಾಗೂ ಪಂದ್ಯಾವಳಿಯ ಬಗ್ಗೆ ಮಾಹಿತಿ ನೀಡಿದರು.
ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಬಾಸ್ಕೆಟ್ಬಾಲ್ ಟೂರ್ನಿಯಲ್ಲಿ ಹಾಗೂ ಖೇಲೋ ಇಂಡಿಯಾ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ದಾವಣಗೆರೆಯಿಂದ ಆಯ್ಕೆ ಯಾದ ವಿಷ್ಣು ಎನ್.ಎಂ ಮತ್ತು ನಿತಿನ್ಕುಮಾರ್ ಅವರನ್ನು ದಾವಣಗೆರೆ ಜಿಲ್ಲಾ ಬಾಸ್ಕೆಟ್ಬಾಲ್ ಸಂಸ್ಥೆ ವತಿ ಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಬಾಸ್ಕೆಟ್ ಬಾಲ್ ಸಂಸ್ಥೆಯ ಕಾರ್ಯದರ್ಶಿ ವೀರೇಶ್ ವಂದಿಸಿದರು.
ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎನ್. ಗೋಪಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಪಟುಗಳಾದ ದರ್ಶನ್, ಸಚಿನ್ ಇನ್ನಿತರರು ಉಪಸ್ಥಿತರಿದ್ದರು.