ದಾವಣಗೆರೆ, ಫೆ. 12- ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದಲ್ಲಿ ಏರ್ಪಾಡಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎ.ಆರ್. ಉಜ್ಜನಪ್ಪ ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಿವೃತ್ತ ಜಂಟಿ ನಿರ್ದೇಶಕ ಹೆಚ್.ಕೆ. ಲಿಂಗರಾಜ್ ಮಾತನಾಡಿ, ರಾಷ್ಟ್ರ ಧ್ವಜ, ಸಂವಿಧಾನ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಕುರಿತು ವಿವರವಾಗಿ ತಿಳಿಸಿದರು. ಉಪಾಧ್ಯಕ್ಷ ವೀರಯ್ಯ, ರಾಜ್ಯ ಸಂಘದ ವಿಭಾಗೀಯ ಉಪಾಧ್ಯಕ್ಷ ಎಸ್. ಗುರುಮೂರ್ತಿ ಉಪಸ್ಥಿತರಿದ್ದರು. ಎಸ್.ಎಂ. ವೀರಯ್ಯ ಸ್ವಾಗತಿಸಿದರು. ಸಿ.ಜಿ. ಕಲ್ಲಪ್ಪ ನಿರೂಪಿಸಿದರು. ಶಿವಲಿಂಗಪ್ಪ ಪ್ರಾರ್ಥಿಸಿದರು. ಬಿ.ಕೆ. ರೇಣುಕಾಮೂರ್ತಿ ವಂದಿಸಿದರು.