ಲೋಕ ಅದಾಲತ್‍ನಲ್ಲಿ 813 ಪ್ರಕರಣಗಳು ಇತ್ಯರ್ಥ

ಲೋಕ ಅದಾಲತ್‍ನಲ್ಲಿ 813 ಪ್ರಕರಣಗಳು ಇತ್ಯರ್ಥ

ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸುಮಾರು ವರ್ಷಗಳಿಂದ ಬಿರುಕು ಗೊಂಡಿದ್ದ ದಾಂಪತ್ಯ ಜೀವನದ ಇಬ್ಬರನ್ನು ಪರಸ್ಪರ ಹೊಂದಾಣಿಕೆ ಮಾಡಿಸಿ ಇಬ್ಬರ ಮನಸ್ಸನ್ನು ಬದಲಾಯಿಸಿ ನೂತನ ಜೀವನಕ್ಕೆ ನ್ಯಾಯಾಧೀಶರು ಮನವೊಲಿಸಿ ಸತಿ-ಪತಿಗಳನ್ನು ಒಗ್ಗೂಡಿಸಿ ಯಶಸ್ವಿಗೊಳಿಸಿದರು.

ಹರಪನಹಳ್ಳಿ, ಫೆ.12- ತಾಲ್ಲೂಕು ಸೇವೆಗಳ ಪ್ರಾಧಿಕಾರದ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ನಡೆದ ಒಟ್ಟು 943 ಪ್ರಕರಣಗಳನ್ನು ಕೈಗೆತ್ತಿಕೊಂಡು, 813 ಪ್ರಕರಣಗಳನ್ನು ಉಭಯ ನ್ಯಾಯಾಲಯದ ನ್ಯಾಯಾಧೀಶರುಗಳಾದ ಎಂ. ಭಾರತಿ, ಮತ್ತು ಫಕ್ಕೀರವ್ವ ಕೆಳಗೇರಿ ನ್ಯಾಯಾಧೀಶ ರುಗಳ ನೇತೃತ್ವದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.

ಪಟ್ಟಣದ ಉಭಯ ನ್ಯಾಯಾಲಯ ಗಳಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾ ಲತ್‍ನಲ್ಲಿ ರಸ್ತೆ ಅಪಘಾತ,ಚೆಕ್ ಬೌನ್ಸ್ , ಬ್ಯಾಂಕ್ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್‌ ಪ್ರಕರಣ, ಮೋಟಾರು ವಾಹನ, ಸಹಕಾರಿ ಬ್ಯಾಂಕುಗಳು, ನಿವೇಶನ ಮಾರಾಟ ಒಳಗೊಂಡಂತೆ ಹಿರಿಯ  ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 435 ಪ್ರಕರಣಗಳ ಪೈಕಿ 338 ಪ್ರಕರಣಗಳನ್ನು ಇತ್ಯರ್ಥಪಡಿಸಿ, ಒಟ್ಟು 1.26 ಕೋಟಿ. ರೂ.ಗಳು ಮತ್ತು ಬ್ಯಾಂಕ್ ದಾವಾ ಪೂರ್ವ ಪ್ರಕರಣಗಳನ್ನು  ಹಣದ ರೂಪದಲ್ಲಿ  ಇತ್ಯರ್ಥ ಪಡಿಸಿದರು.

ಕಿರಿಯ ಸಿವಿಲ್ ನ್ಯಾಯಾಲಯಗಳಲ್ಲಿ ಒಟ್ಟು 508 ಪ್ರಕರಣಗಳ ಪೈಕಿ 475 ಪ್ರಕರಣಗಳನ್ನು  ಇತ್ಯರ್ಥ ಪಡಿಸಿ, ಒಟ್ಟು 52,82,461-00 ರೂ.ಗಳನ್ನು ಹಣದ ರೂಪದಲ್ಲಿ ಇತ್ಯರ್ಥ ಪಡಿಸಿದರು. 

ಉಭಯ ನ್ಯಾಯಾಲ ಗಳಲ್ಲಿ  ಒಟ್ಟು 813  ಪ್ರಕರಣಗಳು, ಮತ್ತು 1,078,84,911-00 ರೂ. ಗಳನ್ನು  ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.

ತಾಲ್ಲೂಕಿನ ಜೆ.ಎಂ.ಎಫ್‌.ಸಿ ನ್ಯಾಯಾ ಲಯದ ಉಭಯ ನ್ಯಾಯಾಧೀಶರುಗಳು ಲೋಕ ಅದಾಲತ್‍ನಲ್ಲಿ ರಾಜೀ ಸಂಧಾನದ ಮೂಲಕ  ಇತ್ಯರ್ಥ ಪಡಿಸಲು ಸಹಕರಿಸಿದ  ವಕೀಲರ ಸಂಘದ ಅಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ, ಪದಾಧಿಕಾರಿಗಳಿಗೆ, ಹಿರಿಯ ನ್ಯಾಯಾವಾದಿಗಳಿಗೆ ಹಾಗೂ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿ ಕೊಂಡ ಎಲ್ಲಾ ಕಕ್ಷಿದಾರರಿಗೆ ಉಭಯ ನ್ಯಾಯಾಲಯದ ನ್ಯಾಯಾಧೀಶರುಗಳಾದ ಎಂ. ಭಾರತಿ, ಮತ್ತು ಫಕ್ಕೀರವ್ವ ಕೆಳಗೇರಿ ಅಭಿನಂದನೆ ಸಲ್ಲಿಸಿದರು.  

 ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ,  ಎಂ. ಅಜ್ಜಣ್ಣ, ಉಪಾಧ್ಯಕ್ಷ ಕೆ. ವಿರೂಪಾಕ್ಷಪ್ಪ,  ಕಾರ್ಯದರ್ಶಿ  ಕೆ. ಆನಂದ,  ಜಂಟಿ ಕಾರ್ಯದರ್ಶಿ ಹೂಲೆಪ್ಪ,  ಖಜಾಂಚಿ ರೇಣುಕ ಮೇಟಿ,  ಸರ್ಕಾರಿ ಅಭಿಯೋಜಕರಾದ ಎನ್. ಮೀನಾಕ್ಷಿ, ನಿರ್ಮಲ, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ. ಜಗದಪ್ಪ, ಹಿರಿಯ ವಕೀಲರಾದ ಟಿ. ವೆಂಕಟೇಶ್, ಬಿ. ಹಾಲೇಶ್, ಎಸ್.ರುದ್ರಮನಿ, ಕೆ. ಪ್ರಕಾಶ್ , ಬಿ. ಗೋಣಿ ಬಸಪ್ಪ, ಕೆ.ಎಸ್.ಮಂಜ್ಯಾನಾಯ್ಕ, ಮುತ್ತಿಗಿ. ರೇವಣಸಿದ್ದಪ್ಪ,  ಎಂ.ಮೃತ್ಯುಂ ಜಯ, ಇದ್ಲಿ ರಾಮಪ್ಪ, ದೇವರಾಜ್, ನಂದೀಶ್, ಎಸ್.ತಿಪ್ಪೇಸ್ವಾಮಿ, ಎಸ್. ಜಾಕೀರ್,  ಬಿ.ಬಸವರಾಜ್, ಜಿ. ಹಾಲೇಶ್, ಓ.ತಿರುಪತಿ, ಕೆ.ಕೊಟ್ರೇಶ್,ಎ.ಕೆ. ರಾಜಪ್ಪ, ಸಿ. ರಾಜಪ್ಪ,  ಕೆ.ನಾಗರಾಜ್, ಸಿ. ಜಾತಪ್ಪ , ಜೆ. ಸೀಮಾ,   ದ್ರಾಕ್ಷಾಯಣಮ್ಮ,  ಬಿ.ಸಿದ್ದೇಶ್, ಸೇರಿದಂತೆ,  ನ್ಯಾಯಾಲಯದ ಸಿಬ್ಬಂದಿಗಳು  ಮತ್ತು ಇತರರು ಇದ್ದರು.

error: Content is protected !!