ರಾಣೇಬೆನ್ನೂರು, ಫೆ.10- ಸ್ಥಳೀಯ ಶ್ರೀ ಲಕ್ಷ್ಮಿನರಸಿಂಹ ಹಾಗೂ ಶ್ರೀ ವರಸಿದ್ದಿ ವಿನಾಯಕ ಕಿರು ಚಿತ್ರ ನಿರ್ಮಾಪಕ ತಂಡದಿಂದ ತಯಾರಿಸಿದ `ಅನ್ನದಾತನ ಅಳಲು’ ಚಿತ್ರದ ಬಿಡುಗಡೆ ಸಮಾರಂಭ ಇದೇ ದಿನಾಂಕ 14 ರಂದು ಕಾಕಿ ಜನಸೇವಾ ಸಭಾ ಭವನದಲ್ಲಿ ನಡೆಯಲಿದೆ. ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ ಉದ್ಘಾಟಿಸಲಿದ್ದು, ನಿರ್ಮಾಪಕರ ಸಂಘದ ಎನ್.ಎಂ. ಸುರೇಶ್ ಬಿಡುಗಡೆ ಮಾಡುವರು. ಶಾಸಕ ಅರುಣಕುಮಾರ, ಕೈಗಾರಿಕಾ ನಿಗಮದ ನಿರ್ದೇಶಕಿ ಭಾರತಿ ಅಳವಂಡಿ, ಎಂ.ಎಸ್. ಅರಕೇರಿ, ಪ್ರಕಾಶ ಬುರಡಿಕಟ್ಟಿ, ರವೀಂದ್ರಗೌಡ ಪಾಟೀಲ, ಶ್ರೀನಿವಾಸ ಕಾಕಿ ಅತಿಥಿಗಳಾಗಿದ್ದು, ಆರ್. ಎಂ. ಕುಬೇರಪ್ಪ ಅಧ್ಯಕ್ಷತೆ ವಹಿಸುವರು. ತೆರಿಗೆ ಅಧಿಕಾರಿ ಪ್ರಾಣೇಶ ಜಮಖಂಡಿ, ಚಿತ್ರ ನಿರ್ದೇಶಕ ಬಿ.ಎ.ಸುನೀಲ ಮತ್ತು ಧಾರಾವಾಹಿ ಸಂಭಾಷಣಾ ಕಾರ್ತಿ ಗಿರಿಜಾ ಮಂಜುನಾಥ ಅವರುಗಳನ್ನು ಸನ್ಮಾನಿಸಲಾಗುವುದು.
January 20, 2025