ದಾವಣಗೆರೆ, ಫೆ.10- ಬೀಡಿ ಕಾರ್ಮಿಕರ ಕಾಲೋನಿಯ ಸಮಸ್ಯೆಗಳ ಕುರಿತು ನಡೆಸುತ್ತಿರುವ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದಿರುವುದಾಗಿ ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಹೆಚ್.ಮಲ್ಲೇಶ್ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ನಗರದ ಬೀಡಿ ಕಾರ್ಮಿಕರ ಕಾಲೋನಿಯಲ್ಲಿದ್ದ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸುವಂತೆ ಒತ್ತಾಯಿಸಿ ಧರಣಿ ನಡೆಸಲಾಗುತ್ತಿತ್ತು.
ಇದೀಗ ಪೌರಾಯುಕ್ತರು ಬೀಡಿ ಕಾರ್ಮಿಕ ಕಾಲೋನಿಯಲ್ಲಿರುವ ಮನೆಗಳಿಗೆ ಖುದ್ದು ಭೇಟಿ ನೀಡಿ ಸಮೀಕ್ಷೆ ನಡೆಸಿ ಫಲಾನುಭವಿಗಳನ್ನು ಗುರುತಿಸಿ ಮಾಹಿತಿ ಪಡೆದಿರುವ ಮೇರೆಗೆ ಹಾಗೂ ಇನ್ನೂ 15 ದಿನದೊಳಗೆ ಹಕ್ಕುಪತ್ರ, ಸಾಲಮನ್ನಾ ಪತ್ರ ಹಾಗೂ ಖಾತೆ ನೋಂದಣಿ ಮಾಡಿಸಿಕೊಡುವ ಭರವಸೆ ಮೇರೆಗೆ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕ ವಾಗಿ ಹಿಂಪಡೆಯಲಾಗಿದೆ ಎಂದವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪಾರ್ಟಿಯ ಜಿಲ್ಲಾಧ್ಯಕ್ಷ ಡಿ.ಹನುಮಂತಪ್ಪ, ಮುಕ್ತಿಯಾರ್ ಅಹಮದ್, ರಜಾಕ್ ವುಲ್ಲಾ ಉಪಸ್ಥಿತರಿದ್ದರು.