ಮುದೇನೂರಿನಲ್ಲಿ ಇಂದು `ಚಿಂತನ-ಮಂಥನ’ ಸಭೆ

ದಾವಣಗೆರೆ, ಫೆ. 10- ಸುಸ್ಥಿರ ಕರ್ನಾಟಕ ಬಳಗದ ವತಿಯಿಂದ ಫೆ. 11 ಮತ್ತು 12 ರಂದು ಎರಡು ದಿನಗಳ ಕಾಲ ಮೊದಲನೇ ಚಿಂತನ ಮಂಥನ ಸಭೆಯನ್ನು ರಾಣೇಬೆನ್ನೂರು ತಾಲ್ಲೂಕಿನ ಮುದೇನೂರಿನ ಪ್ರಗತಿಪರ ರೈತ ಶಂಕರಗೌಡರ ತೋಟದಲ್ಲಿ ಏರ್ಪಡಿಸಲಾಗಿದೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಾಜ, ರಾಜಕಾರಣ, ಆರೋಗ್ಯ, ಆಡಳಿತ, ಹಣಕಾಸಿನ ವ್ಯವಸ್ಥೆ ಸೇರಿದಂತೆ, ರಾಜ್ಯದ ಎಲ್ಲಾ ರಂಗಗಳಲ್ಲೂ ಸಾವಯುವ ಚಿಂತನೆ ತರುವ ಉದ್ದೇಶದಿಂದ ಕೆಲವರು ಕಾರ್ಯನಿರ್ವಹಿಸುತ್ತಿದ್ದಾರೆಂದು ಹೇಳಿದರು.

ಎಲ್ಲಾ ವಿಭಾಗಗಳ ಸಾವಯವ ಚಿಂತಕರನ್ನು ಸೇರಿಸಿ ಎರಡು ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಚಿಂತನೆ ನಡೆಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಶಂಕರಗೌಡ್ರು, ಮಹಿಮಾ ಜೆ. ಪಟೇಲ್, ರಾಘವ, ಬಾ. ಸಂಜೀವ್ ಕುಲಕರ್ಣಿ, ಚುಕ್ಕಿ ನಂಜುಂಡ ಸ್ವಾಮಿ, ನಂದಿನಿ ಜಯರಾಂ, ಕೆ.ಟಿ. ಗಂಗಾಧರ್ ಮತ್ತಿತರರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಐಕಾಂತಿಕಾದ ರಾಘವ ಮಾತನಾಡಿ, ತಾಂತ್ರಿಕತೆ, ಆಧುನಿಕತೆ ಹೆಸರಿನಿಂದ ನಾವು ಎಲ್ಲಾ ರಂಗಗಳಲ್ಲೂ ಕೃತಕ ಜೀವನ ನಡೆಸುತ್ತಿದ್ದು, ಅದನ್ನು ಬಿಟ್ಟು ನಮ್ಮ ಸಾವಯವ ಬದುಕಿಗೆ ಮರಳೋಣ ಎನ್ನುವ ಉದ್ದೇಶದಿಂದ ಈ ಸಭೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

error: Content is protected !!