ದೈವಜ್ಞ ಬ್ರಾಹ್ಮಣ ಸಮಾಜಕ್ಕೆ ಪ್ರಶಾಂತ್ ವೆರ್ಣೇಕರ್ ಅಧ್ಯಕ್ಷ

ದೈವಜ್ಞ ಬ್ರಾಹ್ಮಣ ಸಮಾಜಕ್ಕೆ ಪ್ರಶಾಂತ್ ವೆರ್ಣೇಕರ್ ಅಧ್ಯಕ್ಷ - Janathavaniಕಾರ್ಯದರ್ಶಿಯಾಗಿ ಸತೀಶ್ ಎಸ್. ಸಾನು

ದಾವಣಗೆರೆ,ಫೆ.10- ನಗರದ ದೈವಜ್ಞ ಬ್ರಾಹ್ಮಣ ಸಮಾಜ ಸಂಘದ ಅಧ್ಯಕ್ಷರಾಗಿ ಪ್ರಶಾಂತ್ ವಿಶ್ವನಾಥ್ ವೆರ್ಣೇಕರ್ (ಹೆಗಡೆ) ಮತ್ತು ಕಾರ್ಯ ದರ್ಶಿಯಾಗಿ ಸತೀಶ್ ಎಸ್. ಸಾನು (ಮುಂಡಗೋಡ) ಆಯ್ಕೆಯಾಗಿದ್ದಾರೆ.

ದೈವಜ್ಞ ಬ್ರಾಹ್ಮಣ ಸಮಾಜ ಸಂಘದ ಆಡಳಿತ ಮಂಡಳಿಗೆ ಈಚೆಗೆ ನಡೆದ ಚುನಾವಣೆಯ ನಂತರ ದೈವಜ್ಞ ಕಲ್ಯಾಣ ಮಂಟಪದಲ್ಲಿ ಇಂದು ಏರ್ಪಾಡಾಗಿದ್ದ ಸಂಘದ ನೂತನ ನಿರ್ದೇಶಕರ ಪ್ರಥಮ ಸಭೆಯಲ್ಲಿ ಈ ಆಯ್ಕೆ ಅವಿರೋಧವಾಗಿ ನಡೆಯಿತು. ಸಮಾಜದ ನಿರ್ಗಮಿತ ಅಧ್ಯಕ್ಷ ಸತ್ಯನಾರಾಯಣ ಆರ್. ರಾಯ್ಕರ್ ಮತ್ತು ನಿರ್ಗಮಿತ ಕಾರ್ಯದರ್ಶಿ ವಿಠಲ್ ಆವಾಜಿ ಅವರುಗಳು ನೂತನ ಅಧ್ಯಕ್ಷ ಪ್ರಶಾಂತ್ ಹಾಗೂ ನೂತನ ಕಾರ್ಯದರ್ಶಿ ಸತೀಶ್ ಸಾನು ಅವರುಗಳಿಗೆ ಅಧಿಕಾರ ಹಸ್ತಾಂತರಿಸಿ, ಸನ್ಮಾನಿಸಿ ಗೌರವಿಸುವುದರ ಮೂಲಕ ಶುಭ ಹಾರೈಸಿದರು.

ನೂತನ ನಿರ್ದೇಶಕರುಗಳಾದ ಶಂಕರ್ ನಾಗಪ್ಪ ವಿಠಲ್‌ಕರ್ (ಕಚವಿ), ರಾಜೀವ್ ವಿ. ವೆರ್ಣೇಕರ್ (ಪಿಬಿವಿ), ಉಮೇಶ್ ನಾರಾಯಣ ಪುರುಷನ್, ಪಾಂಡುರಂಗ ಶ್ರೀನಿವಾಸ್ ಭಟ್ ಆವಾಜಿ, ರಾಘವೇಂದ್ರ ನರಸಿಂಹಪ್ಪ ದಿವಾಕರ್ (ಹಗಡಲಿ), ಮಂಜುನಾಥ ಆರ್. ಕುರ್ಡೇಕರ್ (ಹರಿಹರ ರಾಮಣ್ಣ), ರಾಜೇಶ್ ಪಿ. ರೇವಣಕರ್ (ನಲ್ಲೂರು), ಸಾಯಿಪ್ರಕಾಶ್ ಸುಪರ್ ರಾವ್ ವೆರ್ಣೇಕರ್, ರಾಘವೇಂದ್ರ ಸುರೇಶ್ ಕುರ್ಡೇಕರ್ (ಆವರ್ಸಾ), ಸಚಿನ್ ಎಸ್. (ವೆರ್ಣೇಕರ್), ಡಿ.ಎನ್. ಸುಬ್ಬರಾವ್ (ಕುಂಬಳೂರು ಸುಬ್ಬಣ್ಣ), ಮಂಜುನಾಥ ವಿ. ಕುಡತರಕರ್ (ಗಾಲಿ ಮಂಜಣ್ಣ), ಇ. ನಾಗರಾಜ್ ಅಣಜಿ ಕುಡತರಕರ್ (ಅಡುಗೆ ಕಂಟ್ರ್ಯಾಕ್ಟರ್) ಅವರುಗಳು ಸಭಾ ಕಲಾಪದಲ್ಲಿ ಪಾಲ್ಗೊಂಡಿದ್ದರು.

error: Content is protected !!