ಹಡಗಲಿ : ವೈಭವದ ಗವಿಸಿದ್ದೇಶ್ವರ ತೇರು

ಹಡಗಲಿ : ವೈಭವದ ಗವಿಸಿದ್ದೇಶ್ವರ ತೇರು

ಹೂವಿನಹಡಗಲಿ, ಫೆ. 10 – ಗವಿಸಿದ್ದೇಶ್ವರ ರಥೋತ್ಸವ ಸಹಸ್ರಾರು ಭಕ್ತ ಸಮೂಹದ ನಡುವೆ ವೈಭವದಿಂದ ನೆರವೇರಿತು. ರಥೋತ್ಸವಕ್ಕೆ ಶಾರದಮ್ಮ ಈಟಿ ಶಂಭುನಾಥ್ ಚಾಲನೆ ನೀಡಿದರು. ನಾಡಿನ ಹರ ಗುರು ಚರಮೂರ್ತಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. 

ಮಠದಿಂದ ಧಾರ್ಮಿಕ ಸಂಪ್ರ ದಾಯದಂತೆ ಸಮಾಳ, ನಂದಿಕೋಲು ವಿವಿಧ ವಾದ್ಯಗಳೊಂದಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಗವಿಸಿದ್ದೇಶ್ವರರ ಬೆಳ್ಳಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುತ್ತಾ ರಥೋತ್ಸವ ದಲ್ಲಿ ಪ್ರತಿಷ್ಠಾಪಿಸಲಾಯಿತು.

ಬಳಿಕ ಡಾ. ಹಿರಿ ಶಾಂತವೀರ ಮಹಾಸ್ವಾಮಿಗಳು ರಥೋತ್ಸವಕ್ಕೆ ಪೂಜೆ ಸಲ್ಲಿಸಿದ ಬಳಿಕ ಪಟಾಕಿ ಹರಾಜು ನಡೆಯಿತು. ಬಿಜೆಪಿ ಮುಖಂಡ ಓದೋ ಗಂಗಪ್ಪ ಅವರು 1,90,000 ರೂ.ಗಳಿಗೆ ಹರಾಜಿನಲ್ಲಿ ಪಡೆದರು.  ಜಂಗಮ ವಟುಗಳಿಗೆ ಶಿವ ದೀಕ್ಷೆ ಅಯ್ಯಾಚಾರ ನಡೆಯಿತು. 

ನಂತರ ಸಾಮೂಹಿಕ ವಿವಾಹ ಗಳು ನೆರವೇರಿದವು. ಸಾಮೂ ಹಿಕ ವಿವಾಹದ ಮಾಂಗಲ್ಯ ಸೇವೆಯನ್ನು ಶ್ರೀಮತಿ ಭಾಗ್ಯಮ್ಮ ಪಿ.ವಿಜಯ ಕುಮಾರ್ ಅಧ್ಯಕ್ಷರು, ಕಿತ್ತೂರ್ ರಾಣಿ ಚೆನ್ನಮ್ಮ ಬ್ಯಾಂಕ್ ಹಡಗಲಿ ನೆರವೇರಿಸಿ ದರು. ಕಾಲುಂಗುರ, ಖಡಗ, ದಂಡೆ, ಬಾಸಿಂಗ, ಹೂವಿನ ಹಾರ ಸೇವೆಯನ್ನು ಕರಿಯೆತ್ತಿನ ಪ್ರಕಾಶ್ ಶಾಮಿಯಾನ ಸಪ್ಲೈಯರ್‌ ಇವರು ವಹಿಸಿಕೊಂಡಿದ್ದರು. ರಥೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಬೊಂದೆ ಲಾಡನ್ನು ಶ್ರೀ ಕೃಷ್ಣ ನಾಯಕ್ ಅಭಿಮಾನಿ ಬಳಗದಿಂದ ವಿತರಿಸಲಾಯಿತು.

error: Content is protected !!