ದಾವಣಗೆರೆ, ಫೆ.9- ಕುಕ್ಕುವಾಡ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಸ್ವಯಂ ಆಸಕ್ತಿಯಿಂದ ಮಕ್ಕಳ ಶೈಕ್ಷಣಿಕ ಹಿತಕ್ಕಾಗಿ, ಇಲಾಖೆಯ ಅನುಮತಿ ಪಡೆದು ವಾರದ ಮೊದಲ ಮೂರು ದಿನಗಳಿಗೆ ಅನ್ವಯಿಸುವಂತೆ, ಎರಡು ತಿಂಗಳ ಕಾಲ ನಿಯೋಜನೆಗೊಂಡು 10ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ವಿಷಯ ಬೋಧನೆ ಮಾಡಿದ, ಹೂವಿನಮಡು ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಶ್ರೀಮತಿ ಎ.ಸಿ.ಶಶಿಕಲಾ ಶಂಕರಮೂರ್ತಿ ಆದರ್ಶ ಶಿಕ್ಷಕಿ ಎನಿಸಿದ್ದಾರೆ. ಸ್ಕೂಲ್‌ನ ಹಿರಿಯ ಶಿಕ್ಷಕರಿಗೆ ಮನವಿ ಮಾಡಿಕೊಂಡು, ನಿಯೋಜಿತ ಕರ್ತವ್ಯದಿಂದ ಮೊನ್ನೆ ಬಿಡುಗಡೆ ಹೊಂದಿದರು. ಶಶಿಕಲಾ ಶಂಕರಮೂರ್ತಿ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದ ಕೆಪಿಎಸ್ ಸ್ಕೂಲ್‌ನ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ಹೃತ್ಪೂರ್ವಕವಾಗಿ ಗೌರವಿಸಿ, ಬೀಳ್ಕೊಟ್ಟರು.
December 26, 2024