ಹರಪನಹಳ್ಳಿ, ಫೆ.5 – ಇತಿಹಾಸ ಪ್ರಸಿದ್ಧ ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ ದೇವಿ ಸನ್ನಿಧಿಯಲ್ಲಿ ಈ ಬಾರಿ ಭರತ ಹುಣ್ಣಿಮೆ ಯಶಸ್ವಿಯಾಗಿ ಜರುಗಿತು. ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದೇವಿ ದರ್ಶನ ಪಡೆದರು.
ಪುನರ್ವಸತಿ ಯೋಜನೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಯವರು ದೇವದಾಸಿ ಪದ್ಧತಿಯನ್ನು ಆಚರಣೆ ಮಾಡದಂತೆ ಆನೆಹೊಂಡ, ಅರಿಶಿಣ ಹೊಂಡ, ಪಾದಗಟ್ಟಿ ಬಳಿ ಕರ ಪತ್ರ ಹಂಚಿ, ಜಾಗೃತಿ ಮೂಡಿಸಿ, ದೇವಿಯ ಹೆಸರಿನಲ್ಲಿ ಜಡೆ ಬಿಟ್ಟಿದ್ದ ಭಕ್ತರ ಜಡೆಯನ್ನು ಜಾಗೃತಿ ಮೂಡಿಸಿ ಕತ್ತರಿಸಿದರು.
ಎಲ್ಲಡೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ತಹಶೀಲ್ದಾರ್ ಶಿವಕುಮಾರ್ ಬಿರಾದಾರ ನೇತೃತ್ವದ ತಾಲ್ಲೂಕು ಆಡಳಿತ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಈ ವೇಳೆ ಸಿಪಿಐ ನಾಗರಾಜ ಕಮ್ಮಾರ್, ಅರಸಿಕೇರಿ ಪಿಎಸ್‍ಐ ಕಿರಣ್‌ಕುಮಾರ್, ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಪ್ರಜ್ಞಾ ಪಾಟೀಲ್, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಇತರರು ಇದ್ದರು.