ಮಲೇಬೆನ್ನೂರು, ಫೆ.2- ಇಲ್ಲಿನ ಪುರಸಭೆ ಮತ್ತು ನಾಡ ಕಛೇರಿ ವತಿಯಿಂದ ಸವಿತಾ ಮಹರ್ಷಿಗಳ ಜಯಂತಿಯನ್ನು ಸವಿತಾ ಸಮಾಜದವರ ಸಮ್ಮುಖದಲ್ಲಿ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.
ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ, ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್ ಮತ್ತು ಉಪ ತಹಶೀಲ್ದಾರ್ ಆರ್. ರವಿ ಅವರು ಸವಿತಾ ಮಹರ್ಷಿಗಳ ಕುರಿತು ಮಾತನಾಡಿ, ಸಮಾಜದ ಬಂಧುಗಳಿಗೆ ಶುಭ ಕೋರಿದರು.
ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಕೆ.ಜಿ. ಲೋಕೇಶ್, ಷಾ ಅಬ್ರಾರ್, ಟಿ. ಹನುಮಂತಪ್ಪ, ಭೋವಿ ಶಿವು, ಬಿ. ಮಂಜುನಾಥ್, ಪಿ.ಆರ್. ರಾಜು, ದಾದಾಪೀರ್, ಮಹ್ಮದ್ ಖಲೀಲ್, ನಯಾಜ್ ಹಾಗೂ ಮಾಜಿ ಸದಸ್ಯ ಬಿ. ಸುರೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಭೋವಿ ಕುಮಾರ್, ಪಿಎಸಿಎಸ್ ಅಧ್ಯಕ್ಷ ಕೆ.ಪಿ. ಗಂಗಾಧರ್, ಜಿಗಳೇರ ಹಾಲೇಶಪ್ಪ, ಚಮನ್ ಷಾ, ಎಂ.ಬಿ. ರುಸ್ತುಂ ಮತ್ತು ಸವಿತಾ ಸಮಾಜದ ಅಧ್ಯಕ್ಷ ಕೆ.ಬಿ. ಶ್ರೀನಿವಾಸ್, ಗೌರವಾಧ್ಯಕ್ಷ ಪಿ.ಟಿ. ಶಂಕರ್ಬಾಬು, ಖಜಾಂಚಿ ಎನ್.ಎಸ್. ಆಂಜನೇಯ, ಕಾರ್ಯದರ್ಶಿ ಪಿ. ಪ್ರಭಾಕರ್, ಉಪಾಧ್ಯಕ್ಷ ರಾಮ್ಬಾಬು, ಉಪ ಕಾರ್ಯದರ್ಶಿ ಸಂತೋಷ್ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಜೆ. ಬಸವರಾಜ್, ಸಂಚಾಲಕ ನಾಗರಾಜ್, ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ನವೀನ್ಕುಮಾರ್, ಮುಖಂಡರಾದ ಬಸವರಾಜ್, ನಾಗರಾಜ್, ಚನ್ನಬಸಪ್ಪ, ಟಿ. ಹರೀಶ್, ವೀರಭದ್ರಪ್ಪ, ಜಿಗಳಿಯ ವಿರೂಪಾಕ್ಷಿ, ಮಂಜು, ಕೊಮಾರನಹಳ್ಳಿಯ ಅಜ್ಜಪ್ಪ ಸೇರಿದಂತೆ ಎರಡೂ ಸಮಾಜಗಳ ನೂರಾರು ಯುವಕರು ಮತ್ತು ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ, ನಾಡ ಕಛೇರಿಯ ಪುಷ್ಪಾ ಹಿರೇಮಠ್, ಶಿಲ್ಪಾ, ಮಾರುತಿ, ಬಸವರಾಜ್, ಜೈ ಮಾರುತಿ, ಸಂತೋಷ್, ತಾ. ಗ್ರಾ. ಜೆಡಿಎಸ್ ಮಾಜಿ ಅಧ್ಯಕ್ಷ ಬಂಡೇರ ತಿಮ್ಮಣ್ಣ, ಮಡಿವಾಳ ಸಮಾಜದ ಎಂ.ಆರ್. ಮಹಾದೇವಪ್ಪ ಮತ್ತಿತರರು ಭಾಗವಹಿಸಿದ್ದರು.