ದಾವಣಗೆರೆ, ಫೆ.2- ವಿಶ್ವ ವಿಖ್ಯಾತ ಹಂಪಿ ಉತ್ಸವದಲ್ಲಿ ನಗರದ ಸಾ೦ಸ್ಕೃತಿಕ ಸಂಸ್ಥೆ ಚಿರಂತನ ತಂಡ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಪ್ರಶಂಸೆ ಗಳಿಸಿತು.
ಜಾನಪದ ಹಾಗೂ ಲಘು ಶಾಸ್ತ್ರೀಯ ಶೈಲಿಯ ನೃತ್ಯಗಳನ್ನು ಚಿರಂತನ ದ ಕಲಾವಿದೆಯರು ಪ್ರಸ್ತುತಪಡಿಸಿದರು. ವಿಶೇಷವಾದ `ಜೋಗತಿ ನೃತ್ಯ’ಕ್ಕೆ ಸಿಕ್ಕ ಪ್ರೇಕ್ಷಕರ ಚಪ್ಪಾಳೆ ಮೆರುಗು ತಂದಿತು.
ಲಘು ಶಾಸ್ತ್ರೀಯ ಶೈಲಿಯ `ಸಮರಸ ಭಾವನ’ ನೃತ್ಯದಲ್ಲಿ ಭಾರತದ ಹಿರಿಮೆ ಗರಿಮೆಯ ಸಂದೇಶವನ್ನು ನೀಡಲಾಯಿತು. ಕಲಾವಿದೆಯರಾದ ಎಂ.ಕೆ. ಅಧಿತಿ, ಆರ್. ನೇಸರ, ಆರ್.ಡಿ. ಕಂಗನ, ಎಸ್. ಸುಚೇತ, ಎನ್. ವೈಷ್ಣವಿ, ಎಂ.ಕೆ. ಖುಷಿ, ಆರ್.ಎಂ. ವೈಷ್ಣವಿ, ಜೆ.ಎಂ. ಸಾನ್ವಿಕ ನೃತ್ಯ ಪ್ರಸ್ತುತಪಡಿಸಿದರು. ಸಂಸ್ಥೆಯ ಕಾರ್ಯದರ್ಶಿ ಮಾಧವ ಪ್ರಸಾದ್ ಪದಕಿ ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು.