ದಾವಣಗೆರೆ, ಫೆ.1-ಸುಮಾರು 100 ವರ್ಷಗಳ ಹಳೆಯದಾದ ಶ್ಯಾಬನೂರಿನ ಶ್ರೀ ಆಂಜನೇಯ ಸ್ವಾಮಿ ತೇರು ಮನೆಯನ್ನು ತೆರವುಗೊಳಿಸಿ, ಭಕ್ತರ ಹುಂಡಿಯ ಹಣ 25 ಲಕ್ಷ ರೂ. ವೆಚ್ಚದಲ್ಲಿ ಪುನರ್ ನಿರ್ಮಿಸಲಾಗಿದ್ದು, ತಹಶೀಲ್ದಾರ್ ಡಾ. ಅಶ್ವತ್ಥ್ ಅವರು ಉದ್ಘಾಟಿಸಿದರು.
ತೇರು ಮನೆ ಪಕ್ಕದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಶ್ರೀ ಮಾರಮ್ಮ ದೇವಿ ದೇವಸ್ಥಾನ (ಕಟ್ಟೆ) ದಲ್ಲಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ಇದೇ ಸಂದರ್ಭದಲ್ಲಿ ನಡೆಯಿತು.
ನಗರ ಪಾಲಿಕೆ ಮಾಜಿ ಸದಸ್ಯ ಸಂಕೋಳ್ ಚಂದ್ರಶೇಖರ್, ಆಂಜನೇಯ ಸ್ವಾಮಿ ದೇವಸ್ಥಾನದ ಕನ್ವೀನರ್ ಬಿ.ಎಲ್. ಬಸವನಗೌಡ, ಮಾಜಿ ಕನ್ವೀನರ್ ಬಿಂದಪ್ಳ ರೇವಣಸಿದ್ದಪ್ಪ, ಜಿ.ಆರ್. ಮುದೇಗೌಡಪ್ಪ, ಚನ್ನಪ್ಪ ಗೌಡ್ರು, ಮಲ್ಲಿಕಾರ್ಜುನ ಬಾಬು, ವಡೇರಹಳ್ಳಿ ಧನ್ಯಕುಮಾರ್, ತೇರುಮನೆ ಬಿಂದಪ್ಳ ಸಿದ್ದೇಶ್, ಕವಿ, ಹಳ್ಳೇರ ಶಿವಣ್ಣ, ನಾಗರಾಜ್, ಸಂಗಣ್ಣ, ಗಿರೀಶ್, ಬಿ.ಸಿ. ರಾಜೇಂದ್ರ, ಗ್ಯಾರಳ್ಳಿ ಗಣೇಶ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.