ದಾವಣಗೆರೆ, ಫೆ. 1 – ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೊಲ್ಲರಹಳ್ಳಿ ಗ್ರಾಮದಲ್ಲಿ ಶ್ರೀ ಕುಕ್ಕುವಾಡೇಶ್ವರಿ ದೇವಿ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಬಿಜೆಪಿ ಮುಖಂಡರುಗಳಾದ ಬಿ.ಟಿ. ಸಿದ್ದಪ್ಪ ಮತ್ತು ಜಿ.ಎಸ್. ಶಾಮ್ ಅವರುಗಳು ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರೊಡಗೂಡಿ ಗುದ್ದಲಿ ಪೂಜೆ ನೆರವೇರಿಸಿ, ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು.
ಪೂಜಾ ಕಾರ್ಯಕ್ರಮದಲ್ಲಿ ಪ್ರಮುಖರಾದ ಎಂ.ಆರ್. ಪ್ರಕಾಶ್, ಅಂಗಡಿ ಬಸಣ್ಣ, ದುರುಗಪ್ಪ, ಲಿಂಗಪ್ಪ, ಗೊಲ್ಲರಹಳ್ಳಿ ಮಂಜು, ಶಿವಣ್ಣ, ಗಣೇಶ್, ಈಶಪ್ಪ, ಹನುಮಂತಪ್ಪ, ಮಾರುತಿ, ಸೋಮಶೇಖರ್ ಸೇರಿದಂತೆ ಇನ್ನಿತರರು ಭಾಗವಹಿಸಿ ಯಶಸ್ವಿಗೊಳಿಸಿದರು.