ದಾವಣಗೆರೆ, ಫೆ.1- ಹಗಲು-ರಾತ್ರಿ ಎನ್ನದೇ ರಾಜ್ಯದ ಜಿಲ್ಲೆ, ಜಿಲ್ಲೆಗಳಲ್ಲಿ ಪಕ್ಷದ ಪ್ರಚಾರದಲ್ಲಿ ನಮ್ಮ ನಾಯಕ ಸಿದ್ಧರಾಮಯ್ಯ ಎಂದು ಬಿಂಬಿಸಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದ ನಮಗೆ ಬರೀ ಹುಸಿ ಭರವಸೆ. ಹಗಲ ಗನಸು ಹಾಕುತ್ತಾ ನಾವು ಗಳು ದಿನ ಕಳೆಯಬೇಕು. ಇವರುಗಳು ಅಧಿಕಾರ ದಲ್ಲಿ ಮುಂದುವರಿಯಬೇಕೇ? ಎಂದು ಕೇಂದ್ರದ ಮಾಜಿ ಸಚಿವ, ಜೆಡಿಎಸ್ ಮುಖಂಡ ಸಿ.ಎಂ. ಇಬ್ರಾಹಿಂ ಅವರು ಕಾಂಗ್ರೆಸ್ ಆಡಳಿತದ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ನಡೆದ ರಾಜಕೀಯ ಬೆಳವಣಿಗೆ ಕುರಿತು `ಜನತಾವಾಣಿ’ಯೊಂದಿಗೆ ತಮ್ಮ ಅನುಭ ವಗಳನ್ನು ಸಿ.ಎಂ. ಇಬ್ರಾಹಿಂ ಹಂಚಿಕೊಂಡರು.
ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪ್ರಮುಖ ಪಾತ್ರ
ಮುಂಬರುವ ವಿಧಾನಸಭಾ ಚುನಾವಣೆ ಯಲ್ಲಿ ಜಾತ್ಯತೀತ ಜನತಾದಳ ಪ್ರಮುಖ ಪಾತ್ರ ವಹಿಸಲಿದೆ ಎಂದು ಜೆಡಿಎಸ್ ಮುಖಂಡ ಸಿ.ಎಂ. ಇಬ್ರಾಹಿಂ ಹೇಳಿದರು. ಈ ಬಾರಿ ಚುನಾವಣೆ ಬಹಳ ಕುತೂಹಲ ಕೆರಳಿಸಿದ್ದು, ಜನತಾದಳದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜಯ ಸಾಧಿಸುತ್ತಾರೆ. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ `ಪಂಚ ರತ್ನ’ ಯಾತ್ರೆ ಜನತೆ ಅಭೂತಪೂರ್ವ ಸ್ವಾಗತ, ಸಹಕಾರ ಕಂಡರೆ ಮುಂದಿನ ಫಲಿ ತಾಂಶ ಈ ರಾಜ್ಯದ ಚುಕ್ಕಾಣಿ ಜನತಾದಳದ ಪಾಲಾಗಲಿದೆ ಎಂದು ಭವಿಷ್ಯ ನುಡಿದರು.
ಪ್ರಯತ್ನ ಪಟ್ಟು ಗಿಡವನ್ನು ಹೆಮ್ಮರವಾಗಿ ಬೆಳೆಸುವವರು ನಾವು, ಆದರೆ ಅದರಲ್ಲಿ ಬರುವ ಫಲ ಸವಿಯುವವರು ಅವರು. ಇದು ಎಂತಹ ನ್ಯಾಯ? ಎಂದು ಪ್ರಶ್ನಿಸಿದ ಸಿ.ಎಂ. ಇಬ್ರಾಹಿಂ ಅವರು ನಮ್ಮ ತಾಕತ್ತು ಏನು ಎಂಬುದು ಈ ಬಾರಿ ಚುನಾವಣೆಯ ಫಲಿತಾಂಶ ನೋಡಲಿ ಎಂದು ಹೇಳಿ ಹಾಸ್ಯ ಚಟಾಕಿ ಹಾರಿಸಿದರು.
ಬೀದರ್ ಜಿಲ್ಲೆ ಹುಮ್ನಾಬಾದ್ ಕೇಂದ್ರದಲ್ಲಿ ಸ್ಪರ್ಧೆಗಿಳಿದಿರುವ ತಮ್ಮ ಮಗನ ರಾಜಕೀಯ ಭವಿಷ್ಯದ ಬಗ್ಗೆ ವಿವರಿಸಿದ ಇಬ್ರಾಹಿಂ, ಅಲ್ಲಿಯ ಜನರ ಆಶೀರ್ವಾದ ಅವನ ಮೇಲಿದೆ. ಈ ಕ್ಷೇತ್ರದಲ್ಲಿ ಜನತಾ ದಳದ ಗೆಲುವು ಖಚಿತ ಎಂದರು.
ಜೆಡಿಎಸ್ ಮುಖಂಡರಾದ ಷಾನವಾಜ್ ಖಾನ್, ಹೆಚ್. ಶಫೀವುಲ್ಲಾ, ಸ್ಟಾರ್ ಜಬೀವುಲ್ಲಾ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.