ಕೊನೆ ಭಾಗಕ್ಕೆ ತಲುಪದ ಭದ್ರಾ ನೀರು ಅಧಿಕಾರಿಗಳ ಬಳಿ ರೈತರ ಆಕ್ರೋಶ

ಕೊನೆ ಭಾಗಕ್ಕೆ ತಲುಪದ ಭದ್ರಾ ನೀರು  ಅಧಿಕಾರಿಗಳ ಬಳಿ ರೈತರ ಆಕ್ರೋಶ

ಜಿಲ್ಲಾಧಿಕಾರಿ ಭೇಟಿ ಮಾಡಿ ಅಕ್ರಮ ಪಂಪ್‌ಸೆಟ್‌ಗಳ ತೆರವಿಗೆ ಆಗ್ರಹಿಸಿದ ರೈತರು

ಮಲೇಬೆನ್ನೂರು, ಜ. 30 – ಭದ್ರಾ ಜಲಾಶಯದಿಂದ ನಾಲೆಗೆ ನೀರು ಬಿಟ್ಟು 25 ದಿನ ಕಳೆದಿದ್ದರೂ ಕೊನೆ ಭಾಗಕ್ಕೆ ಇದುವರೆಗೂ ಸರಿಯಾದ ಪ್ರಮಾಣದಲ್ಲಿ ನೀರು ಬರುತ್ತಿಲ್ಲ ಎಂದು ಅಚ್ಚುಕಟ್ಟಿನ ಕೊನೇ ಭಾಗದ ರೈತರು ಸೋಮವಾರ ಭದ್ರಾ ಅಧೀಕ್ಷಕ ಅಭಿಯಂತರರಾದ ಶ್ರೀಮತಿ ಸುಜಾತ ಅವರ ಬಳಿ ಆಕ್ರೋಶ ವ್ಯಕ್ತಪಡಿಸಿದರು. 

ಪಟ್ಟಣದ ಭದ್ರಾನಾಲಾ ನಂ-3 ವಿಭಾಗದ ಇಂಜಿನಿಯರ್ ಕಛೇರಿಯಲ್ಲಿ ಕೊನೇ ಭಾಗದ ರೈತರ ಸಮಸ್ಯೆಯನ್ನು ಆಲಿಸಲು ಆಗಮಿಸುತ್ತಿದ್ದ ಶ್ರೀಮತಿ ಸುಜಾತ ಅವರು ರೈತರಿಗೆ ಸಮರ್ಪಕವಾಗಿ ನೀರು ಒದಗಿಸುವ ಭರವಸೆ ನೀಡಿದರು.

ಈ ವೇಳೆ ಹಾಜರಿದ್ದ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನೀರು ಬಳಕೆ ದಾರರ ಸಹಕಾರ ಸಂಘಗಳ ಮಹಾಮಂ ಡಳದ ಅಧ್ಯಕ್ಷ ವೈ. ದ್ಯಾಮಪ್ಪ ರೆಡ್ಡಿ ಮಾತನಾಡಿ ನೀವು ಜಲಾಶಯದಿಂದ ಸಾಕಷ್ಟು ಬಿಟ್ಟಿದ್ದೀರಿ, ಆದರೆ ಬಸವಾಪಟ್ಟ ಣದ ಬಳಿ ಇರುವ ಆರ್‌2 ನಲ್ಲಿ ಮತ್ತು ಕೋಮಾರನಹಳ್ಳಿ ಕಾಲುವೆಯಲ್ಲಿ ನೀರಿನ ಮಟ್ಟ ಕಡಿಮೆ ಇದೆ. ಹಾಗಾಗಿ ಕೊನೆ ಭಾಗಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಹೋಗುತ್ತಿಲ್ಲ. ಆ ಭಾಗದಲ್ಲಿ ನಾಟಿ ಕೆಲಸ ವಿಳಂಬವಾಗಿದೆ ಎಂದರು.

ಸಿರಿಗೆರೆ ರುದ್ರಪ್ಪ, ನಂದಿತಾವರೆ ಮುರುಗೇಂದ್ರಯ್ಯ, ಭಾನುವಳ್ಳಿಯ ಹೆಚ್.ಎಸ್.ಕರಿಯಪ್ಪ, ಕೆ.ಎನ್. ಹಳ್ಳಿಯ ದಿವಾಕರಪ್ಪ, ಜಿಗಳಿಯ ಬಿಳಸನೂರು ಚಂದ್ರಪ್ಪ ಮತ್ತಿತರೆ ರೈತರನ್ನು ಮಾತನಾಡಿ, ಮೇಲ್ಭಾಗದಲ್ಲಿ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವು ಮಾಡಿ ಎಂದು ಆಗ್ರಹಿಸಿದರು. ನಂತರ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ರೈತರು ಅಧಿಕಾರಿಗಳೊಂದಿಗೆ ದಾವಣಗೆರೆಗೆ ತೆರಳಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರನ್ನು ಭೇಟಿ ಮಾಡಿ ಹೈಕೋರ್ಟ್ ಆದೇಶದ ಪ್ರಕಾರ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವು ಮಾಡಿಸಿಕೊಡಿ ಎಂದು ಮನವಿ ಮಾಡಿದರು. ಆಗ ಜಿಲ್ಲಾಧಿಕಾರಿಗಳು ನಾಳೆ ಬೆಸ್ಕಾಂ ಹಾಗೂ ನೀರಾವರಿ ಇಂಜಿನಿಯರ್‌ಗಳ ಜೊತೆ ಚರ್ಚಿಸಿ, ಅಕ್ರಮ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ರೈತರಿಗೆ ಭರವಸೆ ನೀಡಿದರೆಂದು ದ್ಯಾವಪ್ಪ ರೆಡ್ಡಿ ತಿಳಿಸಿದರು.

ಇಇ.ಜಿಎಸ್ ಪಾಟೀಲ್, ಎಇಇ ಚಂದ್ರಕಾಂತ್, ರೈತರಾದ ಕೆ.ಎನ್ ಹಳ್ಳಿ ಚಂದ್ರಶೇಖರ್, ಭಾನುವಳ್ಳಿಯ ಕೆಂಚಪ್ಪ, ಕುಂಬಾರ್ ಬಸವರಾಜ್, ಜಿಗಳಿಯ ಎಕ್ಕೆಗುಂದಿ ರುದ್ರಗೌಡ ಕುಂಬಳೂರಿನ ಗಿರೀಶ್‌ ಹನುಮಂತಪ್ಪ ಮತ್ತಿರರು ಈ ವೇಳೆ ಇದ್ದರು. ಕೊಕ್ಕನೂರಿನ ನಾಗರಾಜ್ ಮತ್ತಿರರು ಈ ವೇಳೆ ಇದ್ದರು.   

error: Content is protected !!