ದಾವಣಗೆರೆ, ಜ. 29 – ದಾವಣಗೆರೆ ತಾಲ್ಲೂಕು 9 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಾವಣಗೆರೆ ತಾಲ್ಲೂಕಿನ ಹೊಸ ಬೆಳವನೂರು ಗ್ರಾಮದಲ್ಲಿ ಬರುವ ಫೆಬ್ರವರಿ 18ರಂದು ನಡೆಯಲಿದೆ ಎಂದು ಉಪನ್ಯಾಸಕರೂ ಆಗಿರುವ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ತಿಳಿಸಿದ್ದಾರೆ. ಈ ಸಾಹಿತ್ಯ ಸಮ್ಮೇಳನದ ಕವಿ ಗೋಷ್ಠಿಯಲ್ಲಿ ಭಾಗವಹಿಸಿ, ಕವನ ವಾಚನ ಮಾಡಲು ಆಸಕ್ತ ಕವಿಗಳು ತಮ್ಮ ಕಿರು ಪರಿಚಯದೊಂದಿಗೆ ಸ್ವ ರಚಿತ ಕವನವನ್ನು ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯಕಾರಿ ಸಮಿತಿಯ ಸದಸ್ಯ ಆರ್.ಶಿವಕುಮಾರ್ ಅವರ ಸಂಚಾರಿ ದೂರವಾಣಿ 9844580345ಗೆ ಬರುವ ಫೆಬ್ರವರಿ 5ರೊಳಗೆ ವಾಟ್ಸಾಪ್ ಮೂಲಕ ಕಳುಹಿಸಿ ಕೊಡಬೇಕೆಂದು ಅವರು ಕೋರಿದ್ದಾರೆ. ಈ ಹಿಂದೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿ ಗೋಷ್ಠಿಯಲ್ಲಾಗಲೀ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಾಗಲೀ ಪಾಲ್ಗೊಂಡ ಕವಿಗಳಿಗೆ ಈ ಸಮ್ಮೇಳನದ ಕವಿಗೋಷ್ಠಿಗೆ ಅವಕಾಶ ಇರುವುದಿಲ್ಲ ಎಂದು ಸುಮತಿ ಜಯಪ್ಪ ತಿಳಿಸಿದ್ದಾರೆ.
January 20, 2025