ಹರಿಹರ, ಜ. 29 – ನಗರದ ಸವಿತಾ ಸಮಾಜದ ವತಿಯಿಂದ ಸವಿತಾ ಮಹರ್ಷಿ ಜಯಂತಿ ಆಚರಣೆ ಮಾಡಲಾಯಿತು.
ಈ ವೇಳೆ ಸಮಾಜದ ವತಿಯಿಂದ ಸವಿತಾ ಮಹರ್ಷಿಯವರ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಯು ತಹಶೀಲ್ದಾರ್ ಕಚೇರಿಯಿಂದ ಆರಂಭಗೊಂಡು ಹೈಸ್ಕೂಲ್ ಬಡಾವಣೆಯ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಅಂತ್ಯಗೊಂಡಿತು. ಈ ಸಂದರ್ಭದಲ್ಲಿ ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷ ಬಾಲರಾಜ್ ಉಪಾಲ್, ಹನುಮಂತಪ್ಪ ವೈ.ಸಿ. ಮಂಜುನಾಥ್, ಆನಂದ್, ಎಂ. ಸಂತೋಷಕುಮಾರ್, ರಾಜು, ವೆಂಕಟೇಶ ಗುತ್ತೂರು, ಯು.ಸಿ. ಹನುಮಂತಪ್ಪ, ಮಂಜುನಾಥ್, ಹರೀಶ್, ಶ್ರೀಕಾಂತ್, ತಿಮಣ್ಣ, ಶ್ರೀಧರ್, ಪಾಂಡು, ಸುನಿಲ್, ಗುರೂಜಿ ವೆಂಕಟೇಶ್ ಮತ್ತಿತರರು ಹಾಜರಿದ್ದರು.