ಜಗಳೂರು, ಜ.29- ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್ ಹಾಗೂ ರೋಟರಿ ಕ್ಲಬ್ ದಾವಣಗೆರೆ, ಸುಕ್ಷೇಮ ಆಸ್ಪತ್ರೆಯ ವೈದ್ಯರ ತಂಡ, ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ತಾಲ್ಲೂಕು ಆಸ್ಪತ್ರೆಯಲ್ಲಿ ಮಹಿಳೆಯರಿಗಾಗಿ ನಡೆದ `ಉಚಿತ ಕ್ಯಾನ್ಸರ್ ಜಾಗೃತಿ ಮತ್ತು ಆರೋಗ್ಯ ತಪಾಸಣಾ ಶಿಬಿರ’ದಲ್ಲಿ ಡಾ. ಸುನಿಲ್ ಬ್ಯಾಡಗಿ, ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ. ನಾಗರಾಜ್, ರೋಟರಿ ಕ್ಲಬ್ ನ ಪಿ.ಬಿ. ಪ್ರಕಾಶ್, ಮೃತ್ಯುಂಜಯ, ಡಾ. ಹಾಲಸ್ವಾಮಿ ಕಂಬಾಳಿಮಠ, ಸಿ.ಕೆ. ರಂಗಪ್ಪ, ರೋಷನ್ ರೇವಣಕರ್, ವೆಂಕಟೇಶ್ ಪಾಲ್ಗೊಂಡಿದ್ದರು.
ಮುಂದಿನ ಶಿಬಿರವನ್ನು ಫೆಬ್ರವರಿ 1 ನೇ ತಾರೀಖು ಸೊಕ್ಕೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.