ದಾವಣಗೆರೆ, ಜ. 27- ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸೇವಾ ಯೋಜನೆ (ಮಂಗಳೂರು) ಇವರ ವತಿಯಿಂದ ವ್ಯವಸ್ಥಾಪನಾ ಸಮಿತಿ ಕುಕ್ಕೆ ಶ್ರೀ ಸುಬ್ರ ಹ್ಮಣ್ಯ ದೇವಸ್ಥಾನ ಇವರ ಸಹಯೋಗದೊಂದಿಗೆ ಯುವ ಸಮ್ಮೇಳನ ಮತ್ತು ತರಬೇತಿ ಕಾರ್ಯಾಗಾರ ಹಾಗೂ ರಾಜ್ಯ ಯುವ ಸಂಘಗಳ ಒಕ್ಕೂಟ ಕೊಡ ಮಾಡುವ ರಾಜ್ಯ ಯುವ ಪ್ರಶಸ್ತಿ ಪ್ರದಾನ ಸಮಾ ರಂಭವನ್ನು ಇತ್ತೀಚಿಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ನಗರದ ಯುವ
ಪ್ರತಿಭೆ ಡಿ.ಬಿ ಶಶಿಕುಮಾರ್ ಸಮಾಜ ಸೇವೆ ಹಾಗೂ ಕ್ರೀಡೆಯಲ್ಲಿ ಸಾಧನೆಯನ್ನು ಗುರುತಿಸಿ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆಯ ಅಂಗವಾಗಿ ರಾಜ್ಯ ಯುವ ಪ್ರಶಸ್ತಿಯನ್ನು ರಾಜ್ಯ ಅಧ್ಯಕ್ಷರಾದ ಎಸ್. ಬಾಲಾಜಿ ಸಹಾಯಕ ನಿರ್ದೇಶಕರು ಯುವ
ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ರವಿ.ವೈ ನಾಯಕ್, ಅಧ್ಯಕ್ಷರು ಮತ್ತು ಸರ್ವ
ಸದಸ್ಯರಾದ ಸುರೇಶ್ ರೈಸೂಡಿಮುಳ್ಳ, ಜಿಲ್ಲಾ ಅಧ್ಯಕ್ಷ ಎನ್.ಕೆ. ಕೊಟ್ರೇಶ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ವಿ., ಸಚಿವ ಎಸ್.ಅಂಗಾರ, ಪ್ರಾಥಮಿಕ
ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹಾಗೂ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ಯುವಜನ ಒಕ್ಕೂಟ ಕಡಬ, ನಿಸರ್ಗ ಯುವಕ ಮಂಡಲ ಐನೆಕ್, ರೈತ ಯುವಕ ಮಂಡಲ 7ನೇ ಕಲ್ಲು. ಸವಣೂರು ಯುವಕ ಮಂಡಲ, ರಾಜ್ಯ ಯುವ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳ ಸಮ್ಮುಖದಲ್ಲಿ ನೆನಪಿನ ಕಾಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.