ದಾವಣಗೆರೆ, ಜ.27- ಶಿವಮೊಗ್ಗದಲ್ಲಿ ನಡೆದ ಕರ್ನಾಟಕ ರಾಜ್ಯ ಮಾಸ್ಟರ್ ಗೇಮ್ಸ್ ವೆಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬಿ.ವಿ. ಕರಿಬಸಪ್ಪ ಮಹಾನಗರ ಪಾಲಿಕೆ ಜಿಮ್ ತಂಡವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿದ್ದಾರೆ. 75 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿರುವ ಕರಿಬಸಪ್ಪ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. ಈ ಸಾಧನೆ ಮಾಡಿದ ಕರಿಬಸಪ್ಪನವರನ್ನು ತರಬೇತುದಾರ ಡಾ. ತರುಣ್ ಕುಮಾರ್, ಡಾ. ಥಾಮಸ್ ರೈಸನ್, ಈಶ್ವರ್ ರೇಡಿಯೋ ಮಾಲೀಕ ರಾಜು, ರಾಜ್ಯ ಬೆಂಚ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ್ ಅಭಿನಂದಿಸಿದ್ದಾರೆ.
December 25, 2024